ಸೌಂದರ್ಯ ಹೆಚ್ಚಿಸುವ ‘ಅಡುಗೆ ಸೋಡಾ’ 06-06-2022 5:30AM IST / No Comments / Posted In: Beauty, Latest News, Live News, Life Style ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ ಇದರ ಪಾತ್ರ ಮಹತ್ವದ್ದು ಎಂಬುದು ನಿಮಗೆ ಗೊತ್ತೇ…? ಸನ್ ಬರ್ನ್ ನಿಂದ ನಿಮ್ಮ ತ್ವಚೆ ಕಪ್ಪಾಗಿದ್ದರೆ ಅದಕ್ಕೆ ಅಡುಗೆ ಸೋಡಾ ಹೇಳಿ ಮಾಡಿಸಿದ ಔಷಧ. ನೀರಿಗೆ ಅಡುಗೆ ಸೋಡಾ ಬೆರೆಸಿ, ಸ್ವಚ್ಛವಾದ ಬಟ್ಟೆಯಿಂದ ನಿಮ್ಮ ಕೈಗೆ ಅದನ್ನು ಹಚ್ಚಿಕೊಳ್ಳಿ. ಅರ್ಧ ಗಂಟೆ ಅವಧಿಯಲ್ಲಿ ನಾಲ್ಕಾರು ಬಾರಿ ಹೀಗೆ ಮಾಡುವುದರಿಂದ ತ್ವಚೆಯ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ. ಬೇಕಿಂಗ್ ಸೋಡಾದ ಪೇಸ್ಟ್ ತಯಾರಿಸಿ ಮುಖಕ್ಕೆ ಫೇಸ್ ಪ್ಯಾಕ್ ರೀತಿ ಹಚ್ಚಿ. ಬಳಿಕ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಿರಿ. ಇದರಿಂದ ತ್ವಚೆಯಲ್ಲಿರುವ ಸತ್ತ ಜೀವಕೋಶ(ಡೆಡ್ ಸೆಲ್ಸ್)ಗಳು ದೂರವಾಗಿ ಮುಖ ಕಳೆಗಟ್ಟುತ್ತದೆ. ಇದೇ ವಿಧಾನದಲ್ಲಿ ಉಗುರು ಬೆಚ್ಚಗಿನ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಅದರಲ್ಲಿ ನಿಮ್ಮ ಕಾಲುಗಳನ್ನು ಅದ್ದಿಟ್ಟರೆ ಹಿಮ್ಮಡಿ ಒಡೆಯುವ ಸಮಸ್ಯೆ ದೂರವಾಗಿ ಕಾಲು ಮೃದುವಾಗುತ್ತದೆ. ಸತ್ತ ಜೀವಕೋಶಗಳು ದೂರವಾಗುತ್ತವೆ.