ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಈ ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ, ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಅದು ಹೇಗೆ ಅಂತ ನೋಡಿ.
* ಕರ್ಪೂರ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಇದರಿಂದ ಮುಖ ಸ್ವಚ್ಛವಾಗಿ ಕಾಣುತ್ತದೆ.
* ಬಿಸಿ ನೀರಿಗೆ ಕರ್ಪೂರ ಸೇರಿಸಿ ಕಾಲಿನ ಹಿಮ್ಮಡಿಗಳಿಗೆ ಹಚ್ಚಿಕೊಳ್ಳುವುದರಿಂದ ಒಡೆದ ಪಾದದ ನೋವು ಕಡಿಮೆಯಾಗುತ್ತದೆ.
* ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬಲಗೊಳ್ಳುತ್ತದೆ.
* 100 ಗ್ರಾಂ ತೆಂಗಿನ ಎಣ್ಣೆಗೆ ಚಿಟಕಿ ಕರ್ಪೂರವನ್ನು ಹಾಕಿ ಮಿಕ್ಸ್ ಮಾಡಿ ಸ್ನಾನವಾದ ನಂತರ ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ.
* ಸುಟ್ಟ ಗಾಯದ ಕಲೆ ಅಥವಾ ಚರ್ಮದ ಮೇಲಿನ ಹಳೆ ಕಲೆ ಹೋಗಲಾಡಿಸಲು ಕರ್ಪೂರವನ್ನು ನೀರಿನಲ್ಲಿ ಒದ್ದೆ ಮಾಡಿ ಅದನ್ನು ಕಲೆಯ ಜಾಗಕ್ಕೆ ಹಚ್ಚುತ್ತಾ ಬಂದರೆ ಕಲೆ ಮಾಯವಾಗುತ್ತದೆ.