ಬಣ್ಣಬಣ್ಣದಲ್ಲಿ ಅರಳಿ ನಿಲ್ಲುವ ದಾಸವಾಳ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದಾಸವಾಳ ಪ್ರಯೋಜನಗಳ ಬಗ್ಗೆ ತಿಳಿದವರು ಕಡಿಮೆ.
ಈ ಹೂವಿನಲ್ಲಿ ಅಂಟಿ ಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇವು ನಮ್ಮ ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕುತ್ತವೆ. ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
ಮಹಿಳೆಯರಿಗೆ ಮೋನೋಪಾಸ್ ಸಮಯದಲ್ಲಿ ಆಟಪ್ಲ್ಯಾಸ್ ಸಮಸ್ಯೆ ಕಂಡುಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲ ಬೆವರುವುದು ಇತ್ಯಾದಿ. ಇದರಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಚಹಾ ಮಾಡಿಕೊಂಡು ಕುಡಿಯುವುದೇ ಉತ್ತಮ ಮಾರ್ಗ. ಈ ಹೂವನ್ನು ಚಹಾದ ರೂಪದಲ್ಲಿ ಬಳಸುವುದರಿಂದ ಯೌವನದ ಚೆಲುವು ಕಡಿಮೆಯಾಗದಂತೆ ತಡೆಯಬಹುದು.
ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಲು ದುಬಾರಿ ಚಿಕಿತ್ಸೆಯನ್ನು ಪಡೆಯುವ ಬದಲು ಪ್ರತಿದಿನ ದಾಸವಾಳದ ಹೂವಿನ ರಸವನ್ನು ಕುಡಿಯುವುದರಿಂದ ಮೊಡವೆ ಆಗುವುದನ್ನು ತಡೆಯಬಹುದು. ಅಲ್ಲದೆ ಈ ಹೂವಿನ ರಸ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.