ವೈನ್ ನಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಹಾಗಾಗಿ ಕಾಂತಿಯುತ ಚರ್ಮವನ್ನು ಪಡೆಯಲು ವೈನ್ ನಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.
*ಒಣ ಚರ್ಮವನ್ನು ಹೊಂದಿರುವವರು 1 ಚಮಚ ಕೋಲ್ಡ್ ಕ್ರೀಂನ್ನು 2 ಚಮಚ ವೈನ್ ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ ಬಳಿಕ ಐಸ್ ನೀರಿನಿಂದ ವಾಶ್ ಮಾಡಿ.
*2 ಚಮಚ ಮೊಸರಿಗೆ 2 ಚಮಚ ಜೇನುತುಪ್ಪ, 2 ಚಮಚ ವೈನ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ.