![](https://kannadadunia.com/wp-content/uploads/2022/08/Homemade-Beauty-Tips-For-Summer-600x350-1.jpg)
ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ ತಿಳಿಯೋಣ.
ನಿಂಬೆ ಹಣ್ಣು ನೈಸರ್ಗಿಕ ಬ್ಲೀಚಿಂಗ್. ಚರ್ಮದ ಮೇಲಿನ ಕಲೆಗಳನ್ನು ಇಲ್ಲವಾಗಿಸುವ ಶಕ್ತಿ ಇದಕ್ಕಿದೆ. ಇದಕ್ಕೆ ರೋಸ್ ವಾಟರ್ ಸೇರಿಸಿ ಫ್ರೀಜರ್ನಲ್ಲಿಡಿ. ನಿಮ್ಮ ಮುಖ ಡಲ್ ಎನಿಸಿದಾಗ ಹಚ್ಚಿ, 20 ನಿಮಿಷ ಬಳಿಕ ತೊಳೆದುಕೊಂಡರೆ ಮುಖ ಕಾಂತಿಯುತವಾಗುತ್ತದೆ.
ಮುಲ್ತಾನಿ ಮಿಟ್ಟಿಗೆ ಎರಡು ಚಮಚ ಶ್ರೀಗಂಧದ ಪುಡಿ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಒಣಗಿದ ಬಳಿಕ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ಇದೂ ನೈಸರ್ಗಿಕವಾಗಿ ನಿಮ್ಮ ತ್ವಚೆ ಹೊಳೆಯುವಂತೆ ಮಾಡುತ್ತದೆ.
ಕಿತ್ತಳೆ ಹಣ್ಣಿನ ರಸ, ಮೂಸಂಬಿ ಹಣ್ಣಿನ ರಸವೂ ಉತ್ತಮ ಪ್ರಭಾವ ಬೀರಿ ಮುಖಕ್ಕೆ ಕಾಂತಿ ಕೊಡುತ್ತವೆ. ಆಲೂಗಡ್ಡೆ ಸಿಪ್ಪೆ ತೆಗೆದು ರುಬ್ಬಿ ರಸ ತೆಗೆದು ಹಚ್ಚಿದರೂ ಅದ್ಭುತ ಪರಿಣಾಮ ಬೀರುತ್ತದೆ.