ತೆಂಗಿನಕಾಯಿಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆಯೊ ಅದಕ್ಕಿಂತಲೂ ಹೆಚ್ಚಿನ ಲಾಭ ತೆಂಗಿನಕಾಯಿಯ ಹಾಲಿನಲ್ಲಿದೆ. ಆರೋಗ್ಯ ಲಾಭದೊಂದಿಗೆ ಸೌಂದರ್ಯ ವೃದ್ಧಿಯನ್ನು ದಯಪಾಲಿಸುವ ಇದನ್ನು ಬಳಸುವ ವಿಧಾನ ನೋಡೋಣ.
ತೆಂಗಿನೆಣ್ಣೆಗಿಂತಲೂ ಈ ಹಾಲು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. ಇದಕ್ಕೆ ತೆಂಗಿನೆಣ್ಣೆಯಂತೆ ಜಿಡ್ಡುಜಿಡ್ಡಾಗಿ ಅಂಟುವ ಗುಣವಿಲ್ಲ. ಇದು ಕೂದಲಿನ ಮೃದುತ್ವವನ್ನು ಕಾಪಾಡುತ್ತದೆ.
ತ್ವಚೆಗೆ ಇದನ್ನು ಮಾಯಿಸ್ಚರೈಸರ್ ರೂಪದಲ್ಲಿ ಬಳಸುವ ಮೂಲಕ ನಿಮ್ಮ ಮುಖವನ್ನು ನಯಗೊಳಿಸಬಹುದು. ಹೊಳಪನ್ನೂ ಪಡೆದುಕೊಳ್ಳಬಹುದು.
ತಾಜಾ ತೆಂಗಿನ ತುರಿಯನ್ನು ಗ್ರೈಂಡ್ ಮಾಡಿ ನೀರು ಬೆರೆಸದಿರಿ. ದಪ್ಪನೆಯ ಈ ಹಾಲಿಗೆ ಗ್ಲಿಸರಿನ್ ಮತ್ತು ರೋಸ್ ವಾಟರ್ ಸೇರಿಸಿ. ಬಳಿಕ ಇದನ್ನು ಫ್ರೀಜರ್ ನಲ್ಲಿಡಿ. ಈ ಹಾಲಿಗೆ ಓಟ್ಸ್ ಪುಡಿ ಬಳಸಿ ಸ್ಕ್ರಬ್ ಮಾಡಿಕೊಳ್ಳಬಹುದು. ಜೇನು ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ನೀಳವಾದ ಕೂದಲು ಹಾಗೂ ತಲೆಹೊಟ್ಟನ್ನು ದೂರಮಾಡಲು ತಲೆಗೂ ಹಚ್ಚಿಕೊಳ್ಳಬಹುದು.