ಅಡುಗೆ ಮನೆಯಲ್ಲಿ ರುಚಿ ನಿರ್ಧರಿಸುವ ಮುಖ್ಯ ವಸ್ತು ಉಪ್ಪು. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ.
ಹೌದು, ಎಣ್ಣೆಯುಕ್ತ ತ್ವಚೆಯಿಂದ ಮುಖದಲ್ಲಿ ಉಂಟಾದ ಗುಳ್ಳೆ, ಧೂಳು ಸೇರಿಕೊಂಡು ಹಾಳಾದ ತ್ವಚೆಯನ್ನು ಸರಿಪಡಿಸಲು ಉಪ್ಪನ್ನು ಹೀಗೆ ಬಳಸಬಹುದು.
ಪುಡಿ ಉಪ್ಪಿಗೆ ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ತಯಾರಿಸಿ. ಹದಿನೈದು ನಿಮಿಷ ಕಾಲ ನಿಮ್ಮ ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮೊಡವೆ, ಕಪ್ಪು ಕಲೆ ಹಾಗೂ ಡೆಡ್ ಸ್ಕಿನ್ ಗಳು ದೂರವಾಗುತ್ತವೆ.
ನಿಂಬೆ ಹಣ್ಣಿನ ರಸಕ್ಕೆ ಉಪ್ಪು ಸೇರಿಸಿ ಮುಖಕ್ಕೆ ಹಚ್ಚಿ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದಲೂ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇವೆರಡೂ ವಿಧಾನಗಳನ್ನು ಡ್ರೈ ಸ್ಕಿನ್ ಇರುವವರು ಬಳಸದಿರುವುದು ಒಳ್ಳೆಯದು. ನೀವು ಉಪ್ಪನ್ನು ಹಾಲಿನ ಕೆನೆಯೊಂದಿಗೆ ಬೆರೆಸಿ ಸ್ಕ್ರಬ್ ಮಾಡಿ ನೋಡಿ. ಇದು ಅತ್ಯುತ್ತಮ ಪರಿಣಾಮ ಬೀರುತ್ತದೆ.