ಆಲೂಗಡ್ಡೆ ಬಾಯಿಗೆ ಮಾತ್ರ ರುಚಿಯಲ್ಲ. ಸೌಂದರ್ಯ ವರ್ಧನೆಯಲ್ಲೂ ಇದರ ಪಾತ್ರ ಬಲು ದೊಡ್ಡದು. ಅದು ಹೇಗೆನ್ನುತ್ತೀರಾ?
ಆಲೂಗಡ್ಡೆಯಲ್ಲಿರುವ ಪೊಟಾಷಿಯಂ ನಿಮ್ಮ ತ್ವಚೆಯನ್ನು ಮಾಯ್ಚಿರೈಸ್ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ6 ಜೀವಕೋಶಗಳು ಮತ್ತೆ ಹುಟ್ಟಲು ನೆರವಾಗುತ್ತದೆ. ಇದರ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಸಹಜ ಆಕರ್ಷಣೀಯ ಸೌಂದರ್ಯ ನಿಮ್ಮದಾಗುತ್ತದೆ.
ಕಾಲು ಭಾಗ ಆಲೂಗಡ್ಡೆಯನ್ನು ತುರಿದು ರಸ ಹಿಂಡಿ ಮೊಸರು ಸೇರಿಸಿ ಮುಖಕ್ಕೆ ಹಚ್ಚಿ, ಹದಿನೈದು ನಿಮಿಷ ಬಳಿಕ ತೊಳೆಯುವುದರಿಂದ ಆಕರ್ಷಕ ತ್ವಚೆ ನಿಮ್ಮದಾಗುತ್ತದೆ ಹಾಗೂ ಮುಖಕ್ಕೆ ಅಗತ್ಯವಾಗಿ ಬೇಕಾಗುವ ತೇವಾಂಶವೂ ಲಭ್ಯವಾಗುತ್ತದೆ.
ಆಲೂಗಡ್ಡೆ ಸ್ಲೈಸ್ ಅನ್ನು ಮುಖಕ್ಕೆ ವೃತ್ತಾಕಾರವಾಗಿ ತಿಕ್ಕುವುದರಿಂದ ಸತ್ತ ಕೋಶಗಳನ್ನು ದೂರ ಮಾಡಬಹುದು. ಇದರಿಂದ ಮೊಡವೆಗಳ ಸಮಸ್ಯೆಯೂ ಕಾಡುವುದಿಲ್ಲ. ಆಲೂಗಡ್ಡೆ ರಸಕ್ಕೆ ಚಿಟಿಕೆ ಅರಶಿನ ಸೇರಿಸಿ ಮುಖ ಕುತ್ತಿಗೆ ಭಾಗಕ್ಕೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆದುಕೊಂಡರೆ ಒಣ ತ್ವಚೆಯ ಸಮಸ್ಯೆ ದೂರವಾಗುತ್ತದೆ.