ವಯಸ್ಸು 35ರ ಗಡಿ ದಾಟಿದ ಬಳಿಕ ತ್ಚಚೆಯ ಆರೈಕೆ ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅಂತಹ ಸಮಸ್ಯೆಗಳಿಗೆ ದುಬಾರಿ ವೆಚ್ಚದ ಕ್ರೀಮ್ ಗಳು ಎಂದಿಗೂ ಪರಿಹಾರ ನೀಡವು. ಅದರ ಬದಲು ಏನು ಮಾಡಬಹುದು ಎಂದಿರಾ?
ಕತ್ತಿನ ಕೆಳಭಾಗದಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳಿ. ಈ ಭಾಗದ ಕೊಬ್ಬು ಕರಗಿಸುವ ಸರಳ ವ್ಯಾಯಾಮಗಳನ್ನು ನಿತ್ಯ ಮಾಡಿ. ದೇಹ ತೂಕ ವಿಪರೀತ ಹೆಚ್ಚಲು ಬಿಡಬೇಡಿ. ವ್ಯಾಯಾಮ ಮಾಡಿಯಾದರೂ ಸರಿ, ಜಿಮ್ ಗೆ ತೆರಳಿದರೂ ಸರಿ, ದೇಹ ತೂಕ ಇಳಿಸಿಕೊಳ್ಳಿ.
ಫೇಶಿಯಲ್ ಮಾಡಿಕೊಳ್ಳಿ. ಮನೆಯಲ್ಲೇ ಇದನ್ನು ಮಾಡಿಕೊಳ್ಳುವ ವಿಧಾನ ತಿಳಿಯಿರಿ. ಮುಖಕ್ಕೆ ಕ್ರೀಮ್ ಹಚ್ಚುವಾಗ ಅಥವಾ ಮಸಾಜ್ ಮಾಡುವಾಗ ಕುತ್ತಿಗೆಯ ಹೊರಭಾಗದಿಂದ ಮೇಲ್ಮುಖವಾಗಿ ಮೃದುವಾಗಿ ಉಜ್ಜಿ.
ಮನೆಯಲ್ಲೇ ಸಿಗುವ ಲೋಳೆರಸ, ತುಳಸಿ ರಸ, ಜೇನುತುಪ್ಪ, ಅರಶಿನ. ಮೊಸರು ಹಣ್ಣಿನ ಸಿಪ್ಪೆಗಳ ಫೇಸ್ ಮಾಸ್ಕ್ ಅನ್ನು ಮನೆಯಲ್ಲೇ ತಯಾರಿಸಿ ಹಾಕಿಕೊಳ್ಳಿ. ಐಸ್ ಪೀಸನ್ನು ಬಟ್ಟೆಯಲ್ಲಿ ಸುತ್ತಿ ಮುಖಕ್ಕೆ ತಿಕ್ಕಿಕೊಳ್ಳುವುದು ಮತ್ತೂ ಒಳ್ಳೆಯದು. ವಾರಕ್ಕೆರಡು ಬಾರಿ ಎಣ್ಣೆ ಹಚ್ಚಿ ಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.