ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಸುಂದರ ಆಭರಣಗಳಲ್ಲೊಂದು. ಶೃಂಗಾರ ಸಾಧನದ ರೂಪದಲ್ಲಿ ಮಹಿಳೆಯರು ಇದನ್ನು ಧರಿಸ್ತಾರೆ. ಕಾಲ್ಚೈನು ಧರಿಸೋದ್ರಿಂದ ಇರುವ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಕೇವಲ ಫ್ಯಾಷನ್ ಗಾಗಿ ಅಲ್ಲ, ಇದರಿಂದ ಹಲವು ವೈಜ್ಞಾನಿಕ ಪ್ರಯೋಜನಗಳಿವೆ.
ಕಾಲ್ಗೆಜ್ಜೆ ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ. ಕಾಲ್ಗೆಜ್ಜೆಯ ಸಪ್ಪಳದಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹಾಗೂ ಪರಿಶುದ್ಧತೆ ಆವರಿಸಿಕೊಳ್ಳುತ್ತದೆ. ಕಾಲ್ಗೆಜ್ಜೆಯ ಧ್ವನಿಯಲ್ಲಿ ಧನಾತ್ಮಕ ಕಂಪನಗಳು ಹೊರಹೊಮ್ಮುತ್ತವೆ.
ಆಯುರ್ವೇದದಲ್ಲಿ ಕೆಲವು ಔಷಧಗಳನ್ನು ಲೋಹದ ಬೂದಿಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಲೋಹದ ಕಾಲ್ಗೆಜ್ಜೆ ಧರಿಸುವುದು ಉತ್ತಮ. ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದರಿಂದ ನಿಮ್ಮ ಕಾಲು ನೋವು ಕಡಿಮೆಯಾಗುತ್ತದೆ. ಶರೀರ ದೌರ್ಬಲ್ಯಕ್ಕೂ ಇದು ಮದ್ದು.
ಬೆಳ್ಳಿಯ ಕಾಲ್ಗೆಜ್ಜೆ ರಕ್ತ ಸಂಚಾರವನ್ನು ಸುಗಮಗೊಳಿಸುವ ಮೂಲಕ ಕಾಲುಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ಇಮ್ಯೂನಿಟಿಯನ್ನು ಬೂಸ್ಟ್ ಮಾಡುವುದಲ್ಲದೆ, ಯಾರು ಬೆಳ್ಳಿ ಕಾಲ್ಗೆಜ್ಜೆ ಧರಿಸ್ತಾರೋ ಅಂತಹ ಮಹಿಳೆಯರಿಗೆ ಮುಟ್ಟಿನ ತೊಂದರೆ, ಹಾರ್ಮೋನುಗಳ ಏರುಪೇರು, ಬಂಜೆತನದ ಸಮಸ್ಯೆ ಕಾಡುವುದಿಲ್ಲ.
ಯಾವ ಮನೆಯಲ್ಲಿ ಮಹಿಳೆಯರು ಕಾಲ್ಗೆಜ್ಜೆ ಧರಿಸ್ತಾರೋ ಆ ಮನೆಯತ್ತ ಭಗವಂತ ಆಕರ್ಷಿತನಾಗುತ್ತಾನಂತೆ. ಆ ಮನೆಯಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಇದೆ.