ಸರ್ಕಾರಿ ಅಧಿಕಾರಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಆರಂಭದಲ್ಲಿ ಟೈಮ್ ಪಾಸ್ ಸಾಧನವಾಗಿದ್ದ ಜಾಲತಾಣಗಳು ಈಗ ಸಂವಹನದ ಮಾಧ್ಯಮಗಳಾಗಿಬಿಟ್ಟಿವೆ. ಸೋಶಿಯಲ್ ಮೀಡಿಯಾ ಮುಖಾಂತರವೇ ಐಎಎಸ್ ಅಧಿಕಾರಿಯೊಬ್ಬರು ಸಾವಿರಾರು ಯುವತಿಯರ ನಿದ್ದೆ ಕದ್ದಿದ್ದಾರೆ, ಅವರೇ ಅಥರ್ ಅಮೀರ್ ಖಾನ್.
ಈ ಅಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರಿಗೆ ಫೇಸ್ಬುಕ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸುಮಾರು 6 ಲಕ್ಷ ಮಂದಿ ಅವರನ್ನು ಫಾಲೋ ಮಾಡ್ತಿದ್ದಾರೆ. ಇದೀಗ ಅಥರ್ ಅಮೀರ್ ಖಾನ್ ಪೋಸ್ಟ್ ಮಾಡಿರೋ ಫೋಟೋಗಳನ್ನು ನೋಡಿ ಯುವತಿಯರು ಫಿದಾ ಆಗ್ಬಿಟ್ಟಿದ್ದಾರೆ.
ಬಿಳಿ ಶರ್ಟ್ ಮತ್ತು ಜೀನ್ಸ್ನಲ್ಲಿ ಕಾಣಿಸಿಕೊಂಡಿರುವ ಅಥರ್ ಅಮೀರ್ ಸಿಕ್ಕಾಪಟ್ಟೆ ಹ್ಯಾಂಡ್ಸಮ್ ಆಗಿ ಕಾಣ್ತಿದ್ದಾರೆ. ಫೋಟೋ ಪೋಸ್ಟ್ ಮಾಡಿ 24 ಗಂಟೆ ಕಳೆಯುವಷ್ಟರಲ್ಲಿ ಇದಕ್ಕೆ 4 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿವೆ. ನೂರಾರು ಯುವತಿಯರು ಹಾರ್ಟ್ ಎಮೋಜಿ ಕಳಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
2015ರ UPSC ಪರೀಕ್ಷೆಯಲ್ಲಿ ಅಥರ್ ಎರಡನೇ ರ್ಯಾಂಕ್ ಗಳಿಸಿದ್ದರು. ಸದ್ಯ ಶ್ರೀನಗರದಲ್ಲಿ ಕಾರ್ಯನಿರ್ವಹಿಸ್ತಿದ್ದಾರೆ. ಅಮೀರ್ ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯವರು. ಕಾಲೇಜು ದಿನಗಳಲ್ಲಿಯೇ ಐಎಎಸ್ ಅಧಿಕಾರಿ ಆಗಬೇಕೆಂದು ನಿರ್ಧರಿಸಿದ್ದರು. ಕಾಲೇಜು ಮುಗಿಯುವ ಮೊದಲೇ ಅಥರ್ ಯುಪಿಎಸ್ಸಿಗೆ ತಯಾರಿ ಆರಂಭಿಸಿದ್ದರು.
ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಾಗ, ಕಷ್ಟದ ಸಂದರ್ಭಗಳಲ್ಲಿಯೂ ಅವರು ಓದನ್ನು ಬಿಡಲಿಲ್ಲ.ಅನೇಕ ಸ್ನೇಹಿತರು ಶಾಲೆಯನ್ನೇ ತೊರೆದಿದ್ದರು. ಐಎಎಸ್ ಅಥರ್ ಖಾನ್ ಅವರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಇತ್ತೀಚೆಗೆ ನಡೆದ ಸ್ಮಾರ್ಟ್ ಸಿಟಿ ಅವಾರ್ಡ್ ಕಾರ್ಯಕ್ರಮದಲ್ಲಿ ವರ್ಷದ ಅತ್ಯುತ್ತಮ ನಗರ ನಾಯಕ ಪ್ರಶಸ್ತಿಯನ್ನು ಪಡೆದಿದ್ದಾರೆ. 2020ರಲ್ಲಿ ಐಐಟಿ ಮಂಡಿಯಿಂದ ಯುವ ಸಾಧಕರ ಪ್ರಶಸ್ತಿಯನ್ನು ಸಾಮಾಜಿಕ ಸೇವೆಗಾಗಿ ಪಡೆದಿದ್ದಾರೆ. 2019ರಲ್ಲಿ ಭಿಲ್ವಾರಾ ಜಿಲ್ಲಾಡಳಿತವು ಲೋಕಸಭೆ ಚುನಾವಣೆಯ ಯಶಸ್ವಿ ನಿರ್ವಹಣೆಗಾಗಿ ಪ್ರಶಸ್ತಿ ನೀಡಿತ್ತು.