ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ತಮ್ಮ ಪುತ್ರಿಯ ಬಗ್ಗೆ ಅವಹೇಳನಾಕಾರಿ ಬರಹ ಹಾಗೂ ವಿಡಿಯೋ ಹಾಕುತ್ತಿರುವ ಕುರಿತಂತೆ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮ್ಮ ಆಪ್ತನ ಮೂಲಕ ಈ ಕುರಿತಂತೆ ಪರಮೇಶ್ವರ್ ದೂರು ದಾಖಲಿಸಿದ್ದು, ಇಂತಹ ಬರಹ ಹಾಗೂ ವಿಡಿಯೋ ಹಾಕುವ ಮೂಲಕ ರಾಜಕೀಯವಾಗಿ ನನ್ನನ್ನು ಮಣಿಸುವ ಕೆಲಸ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ facebook ನಲ್ಲಿ ನಕಲಿ ಖಾತೆ ತೆರೆದಿರುವ ಕಿಡಿಗೇಡಿಗಳು ಅವಹೇಳನಾಕಾರಿ ವಿಡಿಯೋ ಹಾಗೂ ಬರಹಗಳನ್ನು ಹಾಕುವ ಮೂಲಕ ಗೌರವಕ್ಕೆ ಚ್ಯುತಿ ತರಲಾಗುತ್ತಿದೆ ಎಂದು ಪರಮೇಶ್ವರ್ ಆರೋಪಿಸಿದ್ದಾರೆ.