ಖ್ಯಾತ ಯುಟ್ಯೂಬರ್ ಒಬ್ಬರು ಇತ್ತೀಚಿಗೆ ಉತ್ತರಾಖಂಡ್ನಲ್ಲಿ ದೊಡ್ಡದಾಗಿ ಮೊಮೊ ಪಾರ್ಟಿ ಮಾಡಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ತನ್ನ ಸಂತೋಷವನ್ನು ಹಂಚಿಕೊಳ್ಳಲು ಯುಟ್ಯೂಬರ್ ಇಂತಹ ಒಂದು ಸ್ಮರಣೀಯ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.
ಸೋಶಿಯಲ್ ಮೀಡಿಯಾ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಲು ಒಂದು ಪರಿಣಾಮಕಾರಿ ಸಾಧನವಾಗಿದೆ. ಇಂತಹ ಘಟನೆಗಳು ಸ್ಥಳೀಯ ಸಮುದಾಯದ ಮೇಲೆ ಇಂಟರ್ನೆಟ್ನ ವಿವಿಧ ವೇದಿಕೆಗಳು ಬೀರುವ ಸಕರಾತ್ಮಕ ಪರಿಣಾಮಗಳನ್ನು ತೋರಿಸುತ್ತದೆ. ಈ ಯುಟ್ಯೂಬರ್ ತನ್ನ ಸೋಶಿಯಲ್ ಮೀಡಿಯಾ ವೇದಿಕೆಯನ್ನು ಕೇವಲ ಮನರಂಜನೆಗೆ ಮಾತ್ರ ಬಳಸಿಕೊಳ್ಳದೇ ಕೆಲವರ ಜೀವನದಲ್ಲಿ ಸಂತೋಷವನ್ನು ತರಲು ಬಳಸಿಕೊಂಡಿರೋದು ಪ್ರಶಂಸೆಗೆ ಪಾತ್ರವಾಗಿದೆ.
ಅಶ್ವನಿ ಥಾಪಾ ತಮ್ಮ ಯುಟ್ಯೂಬ್ ಖಾತೆಯಲ್ಲಿ ನಾನು 500 ಜನರನ್ನು ಮೊಮೊ ಪಾರ್ಟಿಗೆ ಆಹ್ವಾನಿಸಿದ್ದೇನೆ. ಆದರೆ ಅಲ್ಲಿ ಮಳೆ ಬಂತು ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಮೊಮೊ ಪಾರ್ಟಿಯಲ್ಲಿ ಡಿಜೆಯ ಮೋಜು ಇರೋದನ್ನು ಸಹ ಕಾಣಬಹುದಾಗಿದೆ. ಹಳ್ಳಿಯಾದ್ಯಂತ ಸಂಚರಿಸಿದ ಅಶ್ವನಿ ವೃದ್ಧರಿಂದ ಹಿಡಿದು ಮಕ್ಕಳನ್ನು ಮೊಮೊ ಪಾರ್ಟಿಗೆ ಆಹ್ವಾನಿಸಿದ್ದು ಎಲ್ಲರ ಗಮನ ಸೆಳೆದಿದೆ.