ಟ್ವಿಟರ್, ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ವಿವಿಧ ಸೈಟ್ಗಳಿಂದ ಕನಿಷ್ಟ 1 ವಾರಗಳ ಕಾಲ ವಿರಾಮವನ್ನು ತೆಗೆದುಕೊಳ್ಳುವುದರಿಂದ ಖಿನ್ನತೆ. ಮಾನಸಿಕ ಒತ್ತಡಗಳಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಸೈಬರ್ ಸೈಕಾಲಜಿ, ಬಿಹೇವಿಯರ್ & ಸೋಶಿಯಲ್ ನೆಟ್ವರ್ಕಿಂಗ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕೇವಲ ಒಂದು ವಾರಗಳ ಸಾಮಾಜಿಕ ಮಾಧ್ಯಮಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಒಟ್ಟಾರೆ ಪರಿಣಾಮವನ್ನು ಬೀರುತ್ತದೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವುದರಿಂದ ಖಿನ್ನತೆ ಹಾಗೂ ಆತಂಕಗಳಂತಹ ಲಕ್ಷಣಗಳಿಂದ ದೂರ ಇರಬಹುದು ಎಂದು ಈ ಅಧ್ಯಯನವು ಹೇಳಿದೆ.
ಸಾಮಾಜಿಕ ಮಾಧ್ಯಮದ ಬಳಕೆಯು ದೊಡ್ಡ ಮಟ್ಟದಲ್ಲಿದೆ. ಆದರೆ ಮಾನಸಿಕ ಆರೋಗ್ಯಕ್ಕೆ ಇದು ಒದಗಿಸುವ ಪರಿಣಾಮಗಳ ಬಗ್ಗೆ ನಮಗೆ ಕಾಳಜಿಯಿದೆ.
ಆದ್ದರಿಂದ ಈ ಅಧ್ಯಯನದ ಮೂಲಕ ಒಂದು ವಾರಗಳ ಕಾಲ ಸೋಶಿಯಲ್ ಮೀಡಿಯಾದಿಂದ ವಿರಾಮ ಪಡೆಯುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪ್ರಯೋಜನ ಉಂಟಾಗುತ್ತದೆಯೇ ಎಂದು ನಾವು ನೋಡಲು ಬಯಸಿದ್ದೆವು ಎಂದು ಬಾತ್ ವಿಶ್ವ ವಿದ್ಯಾಲಯದ ಸಂಶೋಧಕ ಜೆಫ್ ಲ್ಯಾಂಬರ್ಟ್ ಹೇಳಿದರು.
ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಸಾಮಾಜಿಕ ಮಾಧ್ಯಮದಿಂದ ವಿರಾಮ ಪಡೆಯುವುದರಿಂದ ಸುಧಾರಿತ ಮನಃಸ್ಥಿತಿ ಹಾಗೂ ಒಟ್ಟಾರೆಯಾಗಿ ಕಡಿಮೆ ಆತಂಕದೊಂದಿಗೆ ಧನಾತ್ಮಕ ಪರಿಣಾಮವನ್ನು ವರದಿ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಿಂದ ಸಣ್ಣ ಮಟ್ಟಗಿನ ವಿರಾಮ ಪಡೆಯುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು ಎಂದು ಲ್ಯಾಂಬರ್ಟ್ ಹೇಳಿದ್ದಾರೆ.