alex Certify ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ ಸಂಭವವಿದೆ. ಹಾಗಾಗಿ ಸೋರಿಯಾಸಿಸ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಬೇಡಿ.

ಆಲ್ಕೋಹಾಲ್ : ನೀವು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಆಲ್ಕೋಹಾಲ್ ಸೇವಿಸಬೇಡಿ. ಆಲ್ಕೋಹಾಲ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದ ಅದು ಚರ್ಮದ ಹೊರಪದರಗಳನ್ನು ಆವರಿಸುತ್ತದೆ.

ಜಂಕ್ ಫುಡ್ : ಜಂಕ್ ಫುಡ್ ಗಳಲ್ಲಿ ಕೊಬ್ಬು, ಪಿಷ್ಠಗಳು, ಸಕ್ಕರೆ ಅಧಿಕವಾಗಿರುತ್ತದೆ. ಇದು ಸೋರಿಯಾಸಿಸ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಮಾಂಸ : ಮಾಂಸದಲ್ಲಿ ಕೊಬ್ಬು ಅಧಿಕವಾಗಿರುವುದರಿಂದ ಇದು ಉರಿಯೂತಕ್ಕೆ ಕಾರಣವಾಗಬಹುದು. ಇದರಿಂದ ಸೋರಿಯಾಸಿಸ್ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುತ್ತದೆ.

ಡೈರಿ ಉತ್ಪನ್ನಗಳು : ಇದರಲ್ಲಿ ಪ್ರೋಟಿನ್ ಗಳು ಅಧಿಕವಾಗಿರುವುದರಿಂದ ಇದು ಉರಿಯೂತವನ್ನು ಹೆಚ್ಚಿಸುತ್ತದೆ.

ಸಿಟ್ರಸ್ ಹಣ್ಣಗಳು : ಸಿಟ್ರಿಸ್ ಹಣ್ಣುಗಳು ಸೋರಿಯಾಸಿಸ್ ನ ಉರಿಯನ್ನು ಹೆಚ್ಚಿಸುತ್ತದೆ. ಆದಕಾರಣ ಕಿತ್ತಳೆ, ನಿಂಬೆ, ದ್ರಾಕ್ಷಿ ಹಣ್ಣಗಳನ್ನು ಸೇವಿಸಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...