ಆಪಲ್ ಕಂಪನಿಯ ಹೊಸ ಐಫೋನ್‌ಗಾಗಿ ಗ್ರಾಹಕರು ಸದಾ ಕಾತರರಾಗಿರ್ತಾರೆ. iPhone 15 ಯಾವಾಗ ಮಾರುಕಟ್ಟೆಗೆ ಬರಬಹುದು? ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಐಫೋನ್ 15 ಬೆಲೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗ್ತಿದೆ.
ಮೂಲಗಳ ಪ್ರಕಾರ iPhone 15 ಮತ್ತು iPhone 15 Pro ಮಧ್ಯೆ ಬೆಲೆಯಲ್ಲಿ ವ್ಯಾಪಕ ಅಂತರವಿರಲಿದೆ ಎಂದು ಹೇಳಲಾಗ್ತಿದೆ. ಆಪಲ್ ಕಂಪನಿ ಇತ್ತೀಚೆಗಷ್ಟೆ ಐಫೋನ್ 14 ಪ್ರೊ ಮಾದರಿಗಳಿಗೆ ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ.
ಭಾರತದಲ್ಲಿ iPhone 14 Pro Max ಬೆಲೆ 1,39,900 ಆಗಿದ್ದರೆ, ಅಮೆರಿಕದಲ್ಲಿ ಒಂದೇ ರೀತಿಯ ಸ್ಮಾರ್ಟ್‌ಫೋನ್ ಬೆಲೆ 1,099 ಡಾಲರ್ ಇದೆ. ಟ್ವಿಟರ್‌ನಲ್ಲಿ ಅಜ್ಞಾತ ಮೂಲವೊಂದು ಆಪಲ್ ಈ ವರ್ಷದ ಐಫೋನ್ 15 ಪ್ರೊ ಸರಣಿಯ ಬೆಲೆಯನ್ನು ಹೆಚ್ಚಿಸಲಿದೆ, ಐಫೋನ್ 15 ಪ್ಲಸ್ ಬೆಲೆಗೂ ಸಾಕಷ್ಟು ಅಂತರವಿರಲಿದೆ ಅಂತಾ ಹೇಳಿದೆ.
ಟಿಪ್‌ಸ್ಟರ್ ಕೂಡ ಐಫೋನ್ 15 ಸರಣಿಯ ಬೆಲೆಗಳ ಬಗ್ಗೆ ಸುಳಿವು ನೀಡಿದೆ. ಐಫೋನ್ 15 ಪ್ರೊ ರೂಪಾಂತರಗಳ ಬೆಲೆಯಲ್ಲಿ ಸುಮಾರು 300 ಡಾಲರ್‌ನಷ್ಟು ಹೆಚ್ಚಾಗಬಹುದು ಅಂತಾ ಹೇಳಲಾಗುತ್ತಿದೆ. ಐಫೋನ್ 15 ಬೆಲೆ ಕಡಿಮೆ ಇರಲಿದೆ ಅಂತಾ ಈ ಮೊದಲು ಹೇಳಲಾಗಿತ್ತು. ಆದರೆ ಕಳೆದ ವಾರ ಐಫೋನ್ 15 ಪ್ರೊ ಮತ್ತು ಐಫೋನ್ 15 ಅಲ್ಟ್ರಾ ಎರಡಕ್ಕೂ 100 ಡಾಲರ್ ಹೆಚ್ಚಳ ಮಾಡಲಾಗಿದೆಯಂತೆ.
iPhone 15 799 ಡಾಲರ್‌ನಿಂದ ಪ್ರಾರಂಭ
iPhone 15 Plus 899 ಡಾಲರ್‌ನಿಂದ ಪ್ರಾರಂಭ
iPhone 15 Pro 1099 ಡಾಲರ್‌ನಿಂದ ಪ್ರಾರಂಭ
iPhone 15 Ultra 1199 ಡಾಲರ್‌ನಿಂದ ಪ್ರಾರಂಭ
ಪ್ರತಿ ವರ್ಷ ನೆಕ್ಸ್ಟ್ ಜನರೇಶನ್ ಐಫೋನ್‌ಗಳಿಗೆ ಸಂಬಂಧಿಸಿದ ವಿವರಗಳು ಸೋರಿಕೆಯಾದ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಫೋನ್ ಕೂಡ ಲಭ್ಯವಾಗುತ್ತದೆ. ಐಫೋನ್ 15 ಸರಣಿ ಕೂಡ ಇದೇ ರೀತಿ ಆಗಬಹುದು ಎಂಬ ನಿರೀಕ್ಷೆಯಿದೆ.