ಅಯ್ಯೋ ಅವ್ನು ಸಿಕ್ಕಾಪಟ್ಟೆ ಸೋಮಾರಿ, ಕೆಲಸಕ್ಕೆ ಬಾರದವನು ಅಂತಾ ಇನ್ಮೇಲೆ ಯಾರನ್ನೂ ಹೀಗಳೆಯಬೇಡಿ. ಯಾಕಂದ್ರೆ ಸೋಮಾರಿಗಳೆಲ್ಲ ವೇಸ್ಟ್ ಬಾಡಿಗಳಲ್ಲ, ಅತ್ಯಂತ ಬುದ್ಧಿವಂತರು. ಅಮೆರಿಕದ ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಇದು ದೃಢಪಟ್ಟಿದೆ.
ಸೋಮಾರಿಯಾಗಿರುವವರೆಲ್ಲ ಹೆಚ್ಚಿನ ಸಮಯವನ್ನು ಚಿಂತನೆಯಲ್ಲಿ ಕಳೆಯುತ್ತಾರಂತೆ, ಈ ಮೂಲಕ ಅವರು ಅತ್ಯಂತ ಬುದ್ಧಿವಂತರಾಗಿ ರೂಪುಗೊಳ್ಳುತ್ತಾರೆ ಅನ್ನೋದು ತಜ್ಞರ ಅಭಿಮತ. ದೈಹಿಕವಾಗಿ ಅತ್ಯಂತ ಚಟುವಟಿಕೆಯಿಂದಿರುವವರಿಗೆ ತಮ್ಮ ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳುವ ಅವಶ್ಯಕತೆಯಿರುತ್ತದೆ.
ಇದ್ರಿಂದಾಗಿ ಚಿಂತನ-ಮಂಥನಕ್ಕೆ ಹೆಚ್ಚು ಅವಕಾಶವಿರುವುದಿಲ್ಲ, ಅತ್ಯಂತ ಸುಲಭವಾಗಿ ಬೇಸರಗೊಳ್ಳುತ್ತಾರೆ. ಹೆಚ್ಚು ಐಕ್ಯೂ ಇರುವವರು ಬೇಗನೆ ಬೇಸರಗೊಳ್ಳುವುದಿಲ್ಲ, ಹಾಗಾಗಿ ಆಲೋಚನೆಯಲ್ಲಿ ತೊಡಗಿಕೊಳ್ತಾರೆ. ವಿದ್ಯಾರ್ಥಿಗಳ ಮೇಲೆ ನಡೆಸಿದ ಪ್ರಯೋಗದಿಂದ ಇದು ಸಾಬೀತಾಗಿದೆ. ಆದ್ರೆ ಕಡಿಮೆ ಚಟುವಟಿಕೆಯಿಂದ ಕೂಡಿರುವವರು ಎಷ್ಟೇ ಬುದ್ಧಿವಂತರಾಗಿದ್ದರೂ, ಅವರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಚಟುವಟಿಕೆಯಿಂದಿರಲೇಬೇಕು.