ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರಿ, ಸ್ಟಾರ್ ಕಿಡ್ ಸುಹಾನಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿ ಇರ್ತಾರೆ. ಇದೇ ಕಾರಣಕ್ಕೆ ಇನ್ಸ್ಟಾಗ್ರಾಂನಲ್ಲಿ ಸುಹಾನಾ ಖಾನ್ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ.
ಈ ಬಾರಿ ಸುಹಾನಾ ಖಾನ್ ತಮ್ಮ ಸೋದರ ಸಂಬಂಧಿ ಆಲಿಯಾ ಅವರ ಜನ್ಮದಿನವನ್ನು ಸೆಲಬ್ರೇಟ್ ಮಾಡಿರುವ ಪೋಸ್ಟ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿರುವ ಸುಹಾನಾ, ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಕಪ್ಪು ಬಣ್ಣದ ಬಾಡಿಕಾನ್ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರೆ ಅಲಿಯಾ ಮರೂನ್ ಬಣ್ಣದ ಉಡುಪು ಧರಿಸಿದ್ದಾರೆ. ಇಬ್ಬರೂ ಈ ಫೋಟೋದಲ್ಲಿ ಸಖತ್ ಅಟ್ರ್ಯಾಕ್ಟಿವ್ ಆಗಿ ಕಾಣ್ತಾ ಇದ್ದಾರೆ.
ಸುಹಾನಾ ಖಾನ್ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಫಿಲಂ ಮೇಕಿಂಗ್ ಮುಂದುವರಿಸಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ತಮ್ಮ ಕಾಲೇಜಿನ ಪ್ರಾಜೆಕ್ಟ್ಗಾಗಿ ‘ದಿ ಗ್ರೇ ಪಾರ್ಟ್ ಆಫ್ ಬ್ಲೂ’ ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದರು.