alex Certify ಸೋಂಕು ನಿವಾರಣೆಗೆ ಸಹಾಯಕ ಬೆಳ್ಳುಳ್ಳಿ ಸಿಪ್ಪೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕು ನಿವಾರಣೆಗೆ ಸಹಾಯಕ ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವಾಗ ಅದರ ಸಿಪ್ಪೆ ಸುಲಿದು ಬಳಸುತ್ತೇವೆ. ಬಳಿಕ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಆ ಸಿಪ್ಪೆಯಿಂದಲೂ ಕೂಡ ಹಲವು ಪ್ರಯೋಜನಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.

*ಸ್ನಾಯು ನೋವು ಮತ್ತು ಸೆಳೆತದಿಂದ ತೊಂದರೆ ಅನುಭವಿಸುತ್ತಿದ್ದರೆ ಬೆಳ್ಳುಳ್ಳಿ ಸಿಪ್ಪೆಯನ್ನು ಸರಿಯಾಗಿ ತೊಳೆದು 20 ನಿಮಿಷ ಕುದಿಸಿ ಅದನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ಇದರಿಂದ ನೋವು ನಿವಾರಣೆಯಾಗುತ್ತದೆ.

*ಶಿಲೀಂಧ್ರ ಸೋಂಕಿನಿಂದ ಚರ್ಮದಲ್ಲಿ ತುರಿಕೆ ಕಂಡು ಬಂದರೆ ಅದರ ಮೇಲೆ ಬೆಳ್ಳುಳ್ಳಿ ಸಿಪ್ಪೆಯಿಂದ ತಯಾರಿಸಿದ ನೀರನ್ನು ಹಚ್ಚಿ. ಸೋಂಕು ನಿವಾರಣೆಯಾಗುತ್ತದೆ.

*ತೋಟಗಾರಿಕೆ ಮಾಡುವವರು ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಸಸ್ಯಗಳನ್ನು ಆರೋಗ್ಯವಾಗಿರಿಸಲು ಬೆಳ್ಳುಳ್ಳಿ ಸಿಪ್ಪೆಯನ್ನು ಬಳಸಿ. ಇದರಿಂದ ಫಸಲು ಉತ್ತಮವಾಗಿ ಬರುತ್ತದೆ.

*ಕೆಲವರಿಗೆ ಕಾಲಿನಲ್ಲಿ ಊತ, ನೋವು ಕಂಡುಬರುತ್ತದೆ. ಅಂತವರು ಬೆಳ್ಳುಳ್ಳಿ ಸಿಪ್ಪೆ ನೀರಿಗೆ ಹಾಕಿ ಕುದಿಸಿ, ಸ್ವಲ್ಪ ಬಿಸಿ ಇರುವಾಗ ಪಾದಗಳನ್ನು ನೆನಸಿಡಿ. ಇದರಿಂದ ಊತ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...