ಕೋವಿಡ್ ಮರು ಸೋಂಕು ಸಂಭವಿಸಬಹುದು ಎಂದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ನಮಗೆ ತಿಳಿದಿದೆ. ಮರು ಸೋಂಕಿನ ವರದಿಗಳು ಸಾಮಾನ್ಯವಾಗಿವೆ. ಓಮಿಕ್ರಾನ್ ರೂಪಾಂತರದ ಬಳಿಕ ದಕ್ಷಿಣ ಆಫ್ರಿಕಾದ ಆರಂಭಿಕ ಸಂಶೋಧನೆಯು ರೂಪಾಂತರವು ಬಂದ ನಂತರ ಮರುಸೋಂಕಿನ ಅಪಾಯವು ತ್ವರಿತವಾಗಿ ಮತ್ತು ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ.
ಮರು ಸೋಂಕುಗಳು ಏಕೆ ಹೆಚ್ಚುತ್ತಿವೆ ಎಂದರೆ ನಮ್ಮ ರೋಗನಿರೋಧಕ ಶಕ್ತಿಯು ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದು ಓಮಿಕ್ರಾನ್‌ನಂತಹ ಹೊಸ ವೈರಲ್ ರೂಪಾಂತರದ ಗೋಚರಿಸುವಿಕೆಯ ಕಾರಣದಿಂದಾಗಿರಬಹುದು. ಇದು ಕೋವಿಡ್ ಪ್ರತಿರಕ್ಷಣೆಯೊಂದಿಗಿನ ಹೋರಾಟದ ಒಂದು ನಿರ್ದಿಷ್ಟ ಸಮಸ್ಯೆಯಾಗಿರುವುದರಿಂದ ಬೂಸ್ಟರ್ ಲಸಿಕೆಯ ಅವಶ್ಯಕತೆಯಿದೆ ಎಂಬುದು ತಜ್ಞರ ಅಭಿಮತವಾಗಿದೆ. ಹಾಗೆಯೇ ಈ ಹಿಂದೆಯೇ ಚರ್ಚಿಸಿದಂತೆ, ಕೊರೋನಾ ವೈರಸ್ ಯಾವಾಗಲೂ ಮೂಗು ಮತ್ತು ಗಂಟಲಿನ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ…! ಕೊನೆಯಾಗುತ್ತಾ ವರ್ಕ್ ಫ್ರಮ್ ಹೋಂ…?
ಫೆಬ್ರವರಿ 6ರ 2022 ರವರೆಗೆ, ಇಂಗ್ಲೆಂಡ್‌ನಲ್ಲಿ 14.5 ಮಿಲಿಯನ್‌ಗಿಂತಲೂ ಹೆಚ್ಚು ಪ್ರಾಥಮಿಕ ಸೋಂಕುಗಳು ಕಂಡು ಬಂದಿವೆ. ಇದರಲ್ಲಿ ಸುಮಾರು 620,000 ಮರು ಸೋಂಕುಗಳು ಕಂಡುಬಂದಿವೆ. ಅಂದರೆ, ಪ್ರತಿ 24 ಪ್ರಾಥಮಿಕ ಸೋಂಕುಗಳಿಗೆ ಒಂದು ಮರು ಸೋಂಕು ಕಂಡು ಬಂದಿದೆ. ಡಿಸೆಂಬರ್ 1ರ 2021 ರಿಂದ ಶೇ.50 ಕ್ಕಿಂತ ಹೆಚ್ಚು ಮರುಸೋಂಕುಗಳು ವರದಿಯಾಗಿವೆ. ಒಮಿಕ್ರಾನ್‌ನೊಂದಿಗೆ ಮರುಸೋಂಕಿನ ಅಪಾಯವು ಗಣನೀಯವಾಗಿ ಹೆಚ್ಚಾಗಿದೆ ಎಂದು ಮತ್ತೊಮ್ಮೆ ಸೂಚಿಸುತ್ತದೆ.
ಇನ್ನು ಲಸಿಕೆ ಹಾಕಿದ ಜನರಲ್ಲಿ ಪ್ರಾಥಮಿಕ ಸೋಂಕುಗಳು ಸಾಮಾನ್ಯವಾಗಿ ಲಸಿಕೆ ಹಾಕದ ಜನರಲ್ಲಿ (ಯಾವುದೇ ರೋಗನಿರೋಧಕ ಶಕ್ತಿಯನ್ನು ಹೊಂದಿರದ) ಪ್ರಾಥಮಿಕ ಸೋಂಕುಗಳಿಗಿಂತ ಕಡಿಮೆ ತೀವ್ರವಾಗಿರುತ್ತದೆ. ಹಾಗಾಗಿಯೇ ಲಸಿಕೆ ಹಾಕಿದವರಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು.