ಸಂಜೆಯಾಗುತ್ತಿದ್ದಂತೆ ಮನೆಯ ಹೊರಗಿನ ವರಾಂಡದಲ್ಲಿ ಕೂರುವಂತಿಲ್ಲ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಲೇ ಬೇಕು. ಇಲ್ಲವಾದರೆ ರಾಶಿ ರಾಶಿ ಸೊಳ್ಳೆಗಳು ಒಳಗಿನಿಂದ ಹಾಗೂ ಹೊರಗಿನಿಂದ ದಾಳಿ ಮಾಡಿ ನಿಮ್ಮನ್ನು ಹೈರಾಣಾಗಿಸುತ್ತದೆ. ಇದರಿಂದ ಮುಕ್ತಿ ಪಡೆಯಲು ಹೀಗೆ ಮಾಡಿ.
ಬೇವಿನ ಎಣ್ಣೆಗೆ ತೆಂಗಿನ ಎಣ್ಣೆಯನ್ನು ಮಿಶ್ರ ಮಾಡಿ ನಿಮ್ಮ ಮೈ ಕೈಗೆ ಹಚ್ಚಿಕೊಂಡರೆ ಸೊಳ್ಳೆಗಳು ನಿಮ್ಮ ಸಮೀಪ ಸುಳಿಯುವುದಿಲ್ಲ.
ಮನೆಯ ಕಿಟಕಿ ಬಾಗಿಲು ಮುಚ್ಚಿ ಕರ್ಪೂರ ಉರಿಸಿ. ಇದರಿಂದ ಸೊಳ್ಳೆಗಳು ಸಮೀಪಕ್ಕೂ ಸುಳಿಯುವುದಿಲ್ಲ. ತುಳಸಿ ಗಿಡವನ್ನು ಮನೆಯ ಕಿಟಿಕಿ ಪಕ್ಕದಲ್ಲಿ ಅಥವಾ ಅಂಗಳದಲ್ಲಿ ಬೆಳೆಸಿದರೆ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ.
ಲ್ಯಾವೆಂಡರ್ ಕೋಣೆಗೆ ಸುವಾಸನೆ ನೀಡುವುದರ ಜೊತೆಗೆ ಸೊಳ್ಳೆಗಳನ್ನು ದೂರಮಾಡುತ್ತದೆ. ಬೆಳ್ಳುಳ್ಳಿ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆಗಳ ಕಾಟದಿಂದ ಮುಕ್ತಿ ದೊರೆಯುತ್ತದೆ.
ದೇಹ ಮುಚ್ಚುವ ಉಡುಪು ಧರಿಸುವುದರಿಂದ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಸೊಳ್ಳೆಗಳ ಕಾಟದಿಂದ ಬಚಾವಾಗಬಹುದು.