ಬೆಳಿಗ್ಗೆ ಬಿಸಿಲು, ಸಂಜೆ ಮಳೆ. ಈ ಹವಾಮಾನದಲ್ಲಿ ಸೊಳ್ಳೆಗಳ ಕಾಟ ಜಾಸ್ತಿ. ಬೆಳಿಗ್ಗೆ ಸಂಜೆ ಎನ್ನದೆ ಎಲ್ಲ ಸಮಯದಲ್ಲಿ ಸೊಳ್ಳೆ ಕಾಟ ಕೊಡುತ್ತೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೇ ಔಷಧಿ ಸಿಂಪಡಿಸಿದ್ರೂ ಸೊಳ್ಳೆ ಕಾಟ ಮಾತ್ರ ತಪ್ಪೋದಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸೊಳ್ಳೆಯನ್ನು ಸುಲಭವಾಗಿ ಓಡಿಸಬಹುದು.
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಲು ಮನೆ ಮದ್ದನ್ನು ನೀವು ಬಳಸಬಹುದು. ಮನೆಯಲ್ಲಿರುವ ನಿಂಬೆ ಹಣ್ಣು ಹಾಗೂ ಲವಂಗವನ್ನು ಬಳಸಿಕೊಂಡು ನೀವು ಸೊಳ್ಳೆ ಓಡಿಸಬಹುದು.
ಎರಡರಿಂದ ಮೂರು ನಿಂಬೆ ಹಣ್ಣನ್ನು ತೆಗೆದುಕೊಳ್ಳಿ. ಅದನ್ನು ಕಟ್ ಮಾಡಿ. ಕತ್ತರಿಸಿದ ನಿಂಬೆ ಹಣ್ಣಿನ ಮೇಲೆ ಲವಂಗವನ್ನು ಅಂಟಿಸಿ ಅದನ್ನು ಮನೆಯ ಮೂಲೆ ಮೂಲೆಯಲ್ಲಿಡಿ. ಇದ್ರಿಂದ ಸೊಳ್ಳೆ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮನೆಯಿಂದ ಹೊರ ಹೋಗುವ ವೇಳೆಯೂ ನೀವು ನಿಂಬೆ ಹಣ್ಣು ಹಾಗೂ ಲವಂಗ ತೆಗೆದುಕೊಂಡು ಹೋದ್ರೆ ಒಳ್ಳೆಯದು. ರಾತ್ರಿ ಸೊಳ್ಳೆ ಕಾಟದಿಂದ ನಿದ್ರೆ ಬಂದಿಲ್ಲವೆಂದಾದಲ್ಲಿ ಮಲಗುವ ಸ್ಥಳದಲ್ಲಿ ಕಟ್ ಮಾಡಿದ ನಿಂಬೆ ಹಣ್ಣು ಹಾಗೂ ಲವಂಗವನ್ನಿಟ್ಟು ನೋಡಿ.