ಋತು ಬದಲಾಗ್ತಿದ್ದಂತೆ ಸೊಳ್ಳೆ ಕಾಟ ಶುರುವಾಗುತ್ತೆ. ಈ ಸೊಳ್ಳೆಗಳಿಂದ ರೋಗಗಳ ಅಪಾಯ ಹೆಚ್ಚಾಗಿರುತ್ತೆ. ಹೊಗೆಬತ್ತಿ, ಲಿಕ್ವಿಡ್, ಸ್ಪ್ರೇಗಳನ್ನು ಬಳಸಿ ಸೊಳ್ಳೆಗಳಿಂದ ಮುಕ್ತಿ ಪಡೆಯೋದಕ್ಕೆ ಪ್ರಯತ್ನ ಮಾಡ್ತೆವೆ. ಬತ್ತಿ ಹಚ್ಚಿದ ಕೆಲ ಸಮಯ ಸೊಳ್ಳೆ ಓಡಿ ಹೋದ್ರೂ ನಂತ್ರ ಮತ್ತೆ ಬರುತ್ತೆ. ಸೊಳ್ಳೆ ಬತ್ತಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮನೆಯಲ್ಲೇ ಮದ್ದು ತಯಾರಿಸಿ ಸೊಳ್ಳೆ ಓಡಿಸಬಹುದು.
ನೀಲಗಿರಿ ಎಣ್ಣೆ ಮತ್ತು ಬೇವಿನ ಎಣ್ಣೆ : ನೀಲಗಿರಿ ಮತ್ತು ಬೇವಿನ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಬಾಟಲಿಯಲ್ಲಿ ತುಂಬಿಸಿ. ಹೆಚ್ಚು ಸೊಳ್ಳೆಗಳು ಇರುವಲ್ಲಿ ಇದನ್ನು ಸಿಂಪಡಿಸಿ. ಇದು ಸೊಳ್ಳೆಗಳನ್ನು ಮನೆಯೊಳಗೆ ಬರದಂತೆ ನೋಡಿಕೊಳ್ಳುತ್ತದೆ.
ಕರ್ಪೂರ : ಕರ್ಪೂರದಲ್ಲಿ ಇರುವಂತಹ ಅಂಶ ಮನಸ್ಸನ್ನು ಶಾಂತಗೊಳಿಸುತ್ತದೆ. ಜೊತೆಗೆ ಸೊಳ್ಳೆಗಳನ್ನ ಸಹ ದೂರವಿಡುತ್ತದೆ. ಕೋಣೆಯಲ್ಲಿ ಕರ್ಪೂರದ ಹೊಗೆ ಹಾಕಿದ್ರೆ ಸೊಳ್ಳೆಗಳು ಓಡಿಹೋಗುತ್ತದೆ.
ಧೂಪದ ಹೊಗೆ : ಧೂಪದ ಹೊಗೆ ಪರಿಮಳ ಬೀರುವ ಜೊತೆಗೆ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಗೆ ಉಳಿಯುವಂತೆ ಮಾಡುತ್ತದೆ. ಸೊಳ್ಳೆಗಳು ಮನೆ ಪ್ರವೇಶ ಮಾಡುವುದಿಲ್ಲ.