ನೀಳ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ನೋಡಿ
ಕೂದಲು ಉದುರಬಾರದು, ಸೊಂಪಾಗಿ ಬೆಳೆಯಬೇಕು ರೇಷ್ಮೆಯಂತೆ ಇರಬೇಕು ಎಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೆ ಇರುತ್ತದೆ.
ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಶಾಂಪೂ, ಕಂಡಿಷನರ್ ಗಳು ಇರುತ್ತದೆ. ಇಷ್ಟೆಲ್ಲಾ ಇದ್ದರು ಬಿಳಿಕೂದಲು, ಕೂದಲು ಉದುರುವಿಕೆ ಸಮಸ್ಯೆ ಕಾಡುವುದು ಬಿಟ್ಟಿಲ್ಲ. ಇಲ್ಲಿ ಸುಲಭವಾಗಿ ಕೂದಲಿನ ಆರೈಕೆ ಮಾಡುವುದಕ್ಕೆ ಟಿಪ್ಸ್ ಇದೆ. ಟ್ರೈ ಮಾಡಿ.
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು 2 ½ ಕಪ್ ನೀರು ಹಾಕಿ ಅದಕ್ಕೆ 5 ಚಮಚದಷ್ಟು ಅಗಸೆ ಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಕುದಿಯಲು ಆರಂಭಿಸಿದಾಗ ಸಣ್ಣ ಉರಿಯಲ್ಲಿ ಇಟ್ಟುಬಿಡಿ.
ಇದು ಜೆಲ್ ರೀತಿ ಆಗುತ್ತದೆ. ತುಂಬಾ ಗಟ್ಟಿಯಾಗುವುದಕ್ಕೆ ಬಿಡಬೇಡಿ. ಮೊಟ್ಟೆಯ ಬಿಳಿ ಲೋಳೆ ರೀತಿ ಆಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ನಂತರ ಇದನ್ನು ಒಂದು ಪಾತ್ರೆಗೆ ಸೋಸಿಕೊಳ್ಳಿ. ಇದನ್ನು ಆರುವುದಕ್ಕೆ ಬಿಟ್ಟುಬಿಡಿ. ನಂತರ ಇದನ್ನು ಕೂದಲಿಗೆ ಚೆನ್ನಾಗಿ ಹಚ್ಚಿಕೊಂಡು 2 ಗಂಟೆ ಬಿಟ್ಟು ತಲೆಸ್ನಾನ ಮಾಡಿ.