alex Certify ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡಾಗ ತಕ್ಷಣ ಏನು ಮಾಡಬೇಕು ? ಇಲ್ಲಿದೆ ‘ಗೋಲ್ಡನ್ ಅವರ್’ ಕುರಿತ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡಾಗ ತಕ್ಷಣ ಏನು ಮಾಡಬೇಕು ? ಇಲ್ಲಿದೆ ‘ಗೋಲ್ಡನ್ ಅವರ್’ ಕುರಿತ ವಿವರ

ಆನ್ಲೈನ್ ಬ್ಯಾಂಕಿಂಗ್ ಹೆಚ್ಚಾಗುತ್ತಿದ್ದಂತೆ ಸೈಬರ್ ವಂಚನೆ ಪ್ರಕರಣಗಳಲ್ಲೂ ಕೂಡಾ ಏರಿಕೆಯಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳಂತೆ ಕರೆ ಮಾಡುವ ಮೂಲಕ, ಮೆಸೇಜ್ ಕಳಿಸುವ ಮೂಲಕ ಹೀಗೆ ವಿವಿಧ ಮಾರ್ಗಗಳಲ್ಲಿ ವಂಚಕರು ಹಣ ಲಪಟಾಯಿಸಲು ಪ್ರಯತ್ನಿಸುತ್ತಿರುತ್ತಾರೆ.

ಈ ರೀತಿ ಹಣ ಕಳೆದುಕೊಂಡ ವೇಳೆ ತಕ್ಷಣ ಏನು ಮಾಡಬೇಕು, ಆ ಹಣ ವಾಪಸ್ ಬರಲು ಯಾವ ಕ್ರಮ ಅನುಸರಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಇತ್ತೀಚೆಗಷ್ಟೇ ‘ಗೋಲ್ಡನ್ ಅವರ್’ ಸೌಲಭ್ಯ ಆರಂಭಿಸಿದ್ದು, ಇದನ್ನು ಬಳಸಿಕೊಂಡರೆ ಹಣ ವಾಪಸ್ ಪಡೆಯಬಹುದಾಗಿದೆಯಲ್ಲದೆ ಖಾತೆಯಿಂದ ಮತ್ತಷ್ಟು ಹಣ ಕಡಿತವಾಗುವುದು ಸಹ ತಪ್ಪಲಿದೆ.

‘ಗೋಲ್ಡನ್ ಅವರ್’ ಎಂದರೆ ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ಒಂದು ಗಂಟೆ ಒಳಗಾಗಿ ನಾವು ಮಾಡುವ ಕಾರ್ಯ. ಅಂತಹ ಸಂದರ್ಭದಲ್ಲಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂ 1930 ಕ್ಕೆ ಕರೆ ಮಾಡಬೇಕು ಅಥವಾ ವೆಬ್ಸೈಟ್ www.cybercrime.gov.in ಮೂಲಕವೂ ದೂರು ಸಲ್ಲಿಸಬಹುದಾಗಿದೆ.

ಇದೆಲ್ಲವೂ ಅತ್ಯಂತ ತ್ವರಿತವಾಗಿ ಆಗಬೇಕಾದ ಕೆಲಸ. ಈ ರೀತಿ ದೂರು ಸಲ್ಲಿಸಿದ ವೇಳೆ ಪೊಲೀಸ್ ಸಿಬ್ಬಂದಿ ಕೇಳುವ ಸಂಪೂರ್ಣ ಮಾಹಿತಿ ನೀಡಿದರೆ ಇದನ್ನು ಆಧರಿಸಿ ತಕ್ಷಣವೇ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ. ಇದರಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸೈಬರ್ ವಂಚಕರ ಬಲೆಗೆ ಬೀಳದಂತೆ ಎಚ್ಚರ ವಹಿಸುವುದು ಅತಿ ಮುಖ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...