alex Certify ಸೈಬರ್‌ ಕ್ರೈಂ, ಫಿಶಿಂಗ್‌ನಂತಹ ಮೋಸದಿಂದ ನಿಮ್ಮ ಡಿವೈಸ್‌ ಅನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಬರ್‌ ಕ್ರೈಂ, ಫಿಶಿಂಗ್‌ನಂತಹ ಮೋಸದಿಂದ ನಿಮ್ಮ ಡಿವೈಸ್‌ ಅನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

ಸೈಬರ್ ವಂಚಕರು ನಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕದ್ದು ನಮ್ಮನ್ನು ಮೋಸಗೊಳಿಸಲು ಬಳಸುವ ಸುಲಭವಾದ ಮಾರ್ಗಗಳಲ್ಲಿ ಫಿಶಿಂಗ್‌ ಕೂಡ ಒಂದು. ಫಿಶಿಂಗ್ ಮೂಲಕ ವಂಚಕರು ಬಳಕೆದಾರರ ಹೆಸರು, ಪಾಸ್‌ವರ್ಡ್‌, ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ವಿವರಗಳಂತಹ ಡೇಟಾವನ್ನು ಕದಿಯುತ್ತಾರೆ. ಇಮೇಲ್‌ ಅಥವಾ ಎಸ್‌ಎಂಎಸ್‌ ಓಪನ್‌ ಮಾಡಲು ನಕಲಿ ಇಮೇಲ್ ಐಡಿಗಳು, ವೆಬ್‌ಸೈಟ್‌ಗಳು ಮತ್ತು ಎಸ್‌ಎಂಎಸ್‌ಗಳನ್ನು ಸೃಷ್ಟಿಸಲಾಗುತ್ತದೆ.

ಕೊರೊನಾ ಸೋಂಕು ಆರಂಭವಾದಾಗಿನಿಂದ್ಲೂ ಫಿಶಿಂಗ್‌ ಅಟ್ಯಾಕ್‌ ಸಾಕಷ್ಟು ಹೆಚ್ಚಿದೆ. ಹಾಗಾಗಿ ಬಳಕೆದಾರರು ಫಿಶಿಂಗ್ ಇಮೇಲ್‌ಗಳು/ ಸಂದೇಶಗಳನ್ನು ಪತ್ತೆ ಹಚ್ಚುವ ವಿಧಾನಗಳನ್ನು ಅರ್ಥಮಾಡಿಕೊಳ್ಳಬೇಕು. 2021ರಲ್ಲಿ ಭಾರತದಲ್ಲಿ ಫಿಶಿಂಗ್‌ ಘಟನೆಗಳು ದ್ವಿಗುಣಗೊಂಡಿವೆ ಎಂದು ಖುದ್ದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವರೇ ಉಲ್ಲೇಖಿಸಿದ್ದಾರೆ. 2020ರಲ್ಲಿ 280 ಇಂತಹ ವಂಚನೆ ಪ್ರಕರಣಗಳು ನಡೆದಿದ್ದವು, 2021ರಲ್ಲಿ ಈ ಸಂಖ್ಯೆ 523ಕ್ಕೆ ಏರಿದೆ. ಫಿಶಿಂಗ್‌ ಲಿಂಕ್ ಅಥವಾ ಇಮೇಲ್ ಅನ್ನು ಗುರುತಿಸಲು ನಾವು ಯಾವ್ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅನ್ನೋದನ್ನು ನೋಡೋಣ.

ತುರ್ತು ಕ್ರಮಕ್ಕಾಗಿ ವಿನಂತಿಸುವ ಮೆಸೇಜ್‌ /ಇಮೇಲ್‌ಗಳು….

ಅವಕಾಶವನ್ನು ಕಳೆದುಕೊಳ್ಳುವ ಬೆದರಿಕೆ ಅಥವಾ ಅರ್ಜೆಂಟಾಗಿ ಆಗಲೇಬೇಕು ಎಂಬಂತೆ ಒತ್ತಾಯಿಸುವ ಮಾಹಿತಿಗಳಿದ್ದರೆ ಸಾಮಾನ್ಯವಾಗಿ ಅದು ಫಿಶಿಂಗ್ ಇಮೇಲ್‌ ಆಗಿರುತ್ತದೆ. ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಇಂತಹ ಮೆಸೇಜ್‌ಗಳನ್ನು ಸರಿಯಾಗಿ ಓದುವ ಮೊದಲೇ ಬಳಕೆದಾರರನ್ನು ವಂಚಿಸಲು ಈ ರೀತಿ ಯೋಜನೆ ರೂಪಿಸುತ್ತಾರೆ.

ಲಾಗಿನ್ ಮತ್ತು ಪಾವತಿ ವಿವರಗಳನ್ನು ಕೇಳುವ ಕರೆ ಅಥವಾ ಸಂದೇಶ…

ಲಾಗಿನ್ ವಿವರಗಳು, ಹಣಕಾಸಿನ ಮಾಹಿತಿ ಅಥವಾ ಇತರ ಸೂಕ್ಷ್ಮ ಡೇಟಾವನ್ನು ಕೊಡುವಂತೆ ವಿನಂತಿಸುವ ಯಾವುದೇ ಸಂದೇಶ ಅಥವಾ ಇಮೇಲ್ ಅನ್ನು ಯಾವಾಗಲೂ ಅತ್ಯಂತ ಎಚ್ಚರಿಕೆಯಿಂದ ಪರಿಗಣಿಸಬೇಕು. ಫಿಶರ್‌ಗಳು ನಕಲಿ ಎಂದು ಗೊತ್ತಾಗದಂತೆ ಲಾಗಿನ್ ಪುಟಗಳನ್ನು ಕಾಪಿ ಮಾಡಿಬಿಡುತ್ತಾರೆ. ನಕಲಿ ಪುಟಕ್ಕೆ ನಿರ್ದೇಶಿಸುವ ಲಾಗಿನ್ ಲಿಂಕ್‌ನೊಂದಿಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸುತ್ತಾರೆ. ಸ್ವೀಕರಿಸುವವರು ಜಾಗರೂಕರಾಗಿರಬೇಕು ಮತ್ತು ವೆಬ್‌ಸೈಟ್ ನಿಜ ಮತ್ತು ಅಸಲಿ ಎಂದು ಖಚಿತವಾಗದ ಹೊರತು ಯಾವುದೇ ಮಾಹಿತಿಯನ್ನು ಹಾಕಬಾರದು.

URL ಅನ್ನು ಹತ್ತಿರದಿಂದ ನೋಡುವ ಮೂಲಕ ನೀವು ವೆಬ್‌ಸೈಟ್‌ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬಹುದು. URL “https://” ಅಥವಾ “shttp://” ನೊಂದಿಗೆ ಪ್ರಾರಂಭವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ವೆಬ್ ವಿಳಾಸದಲ್ಲಿರುವ “S” ವೆಬ್‌ಪುಟವನ್ನು ಸುರಕ್ಷಿತ ಸಾಕೆಟ್‌ಗಳ ಲೇಯರ್ (SSL) ಕ್ರಿಪ್ಟೋಗ್ರಾಫಿಕ್ ಪ್ರೋಟೋಕಾಲ್‌ನೊಂದಿಗೆ ಸುರಕ್ಷಿತಗೊಳಿಸಲಾಗಿದೆ ಎಂದು ಚಿತ್ರಿಸುತ್ತದೆ.

ವೆಬ್‌ಸೈಟ್‌ನಲ್ಲಿ ಇವೆರಡೂ ಇಲ್ಲದಿದ್ದಲ್ಲಿ, ಈ ಸೈಟ್‌ನಲ್ಲಿನ ಯಾವುದೇ ಡೇಟಾ ಅಸುರಕ್ಷಿತವಾಗಿರುತ್ತದೆ ಮತ್ತು ಮೂರನೇ ವ್ಯಕ್ತಿಗಳು ಸುಲಭವಾಗಿ ಬಳಸಬಹುದು. ವೆಬ್ ವಿಳಾಸದ ಕಾಗುಣಿತವನ್ನು ಹತ್ತಿರದಿಂದ ನೋಡಬೇಕು. ಅಧಿಕೃತವಾಗಿ ಕಾಣಲೆಂದು ಫಿಶರ್‌ಗಳು ನೈಜ ವೆಬ್ ವಿಳಾಸದ ವರ್ಣಮಾಲೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುತ್ತಾರೆ. ಉದಾಹರಣೆಗೆ, ನಾವು ‘Safehousetech.com’ ಅನ್ನು ಬಳಸೋಣ, ‘S’ ಅಕ್ಷರವನ್ನು ‘5’ ನೊಂದಿಗೆ ಬದಲಾಯಿಸಬಹುದು ಅಥವಾ ‘Safehousetechh.com’ ನಂತಹ ಹೆಚ್ಚುವರಿ ಅಕ್ಷರವನ್ನು ಸೇರಿಸಬಹುದು.

ವಿಷಯ ಮತ್ತು ವಿನ್ಯಾಸವನ್ನು ಎರಡು ಬಾರಿ ಪರಿಶೀಲಿಸಿ…

ಫಿಶಿಂಗ್ ಅನ್ನು ಗುರುತಿಸುವ ಇನ್ನೊಂದು ವಿಧಾನವೆಂದರೆ ವ್ಯಾಕರಣ ಮತ್ತು ಕಾಗುಣಿತ ತಪ್ಪುಗಳನ್ನು ಹುಡುಕುವುದು. ಫಿಶಿಂಗ್ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ಕಳಪೆ ವಾಕ್ಯ ರಚನೆ ಮತ್ತು ಕಳಪೆ ಭಾಷೆಯನ್ನು ಹೊಂದಿದ್ದು ಅದು ನಿಜವಾದ ಕಂಪನಿಯು ಬಳಸುವ ವೃತ್ತಿಪರ ಭಾಷೆಯಂತೆ ಇರುವುದಿಲ್ಲ. ಲೇಔಟ್, ಫಾಂಟ್, ಬಣ್ಣಗಳು ಮತ್ತು ಕಡಿಮೆ ರೆಸಲ್ಯೂಶನ್ ಚಿತ್ರಗಳ ವಿಷಯದಲ್ಲಿ ಕಳಪೆ ವಿನ್ಯಾಸವನ್ನು ಹೊಂದಿರುವ ವೆಬ್‌ಸೈಟ್‌ಗಳನ್ನು ಅನುಮಾನಾಸ್ಪದ ಎಂದು ಲೇಬಲ್ ಮಾಡಬೇಕು. ಕೆಲವು ರೀತಿಯ ಕ್ಲೈಮ್ ಮಾಡುವ ಇಮೇಲ್‌ಗಳ ಬಗ್ಗೆ ಸಹ ಎಚ್ಚರದಿಂದಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...