ಸೈನಿಕ ಹುಳು ಬಾಧೆಗೆ ಎರಡೇ ದಿನಗಳಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ ನಾಶವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಆನವಟ್ಟಿ ಹೋಬಳಿಯಲ್ಲಿ ನಡೆದಿದೆ.
ಕೇವಲ ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿದ್ದ ಮೆಕ್ಕೆಜೋಳ, ಸೈನಿಕ ಹುಳ ಬಾಧೆಗೆ ಈ ರೀತಿ ನಾಶವಾಗಿರುವುದರಿಂದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸಾಲಸೋಲ ಮಾಡಿ ಈ ಬೆಳೆಯನ್ನು ಬೆಳೆದಿದ್ದು, ಈಗ ಈ ರೀತಿ ಆಗಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ರೈತರು ಹೇಳಿದ್ದಾರೆ.
8 ಅಥವಾ 5 ವರ್ಷಗಳಿಗೊಮ್ಮೆ ಸೈನಿಕ ಹುಳು ಬಾಧೆ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದ್ದು, ಈ ಹುಳು 800ರಿಂದ 1000 ದಷ್ಟು ಮರಿಗಳು ಹಾಕುತ್ತವೆ ಎನ್ನಲಾಗಿದೆ. ಸೈನಿಕ ಹುಳು ಬಾಧೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.