ಜನವರಿ ಆರನೇ ತಾರೀಖಿನಂದು ತಮಿಳು ನಟ ಸಿದ್ಧಾರ್ಥ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಲೈಂಗಿಕ ಅವಹೇಳನಕಾರಿ ಟ್ವೀಟ್ನ್ನು ಮಾಡಿದ್ದರು. ವಿಶ್ವದ ಸಣ್ಣ ಕಾಕ್ ಚಾಂಪಿಯನ್….. ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ನಿಮಗೆ ನಾಚಿಕೆಯಾಗಬೇಕು #ರಿಹಾನ್ನಾ ಎಂದು ಬರೆದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಫಿರೋಜ್‌ಪುರ ಭೇಟಿ ವೇಳೆ ಪಂಜಾಬ್‌ನಲ್ಲಿ ಭದ್ರತಾ ಲೋಪವನ್ನು ಸೈನಾ ತಮ್ಮ ಟ್ವೀಟ್‌ನಲ್ಲಿ ಖಂಡಿಸಿದ್ದರು.
ಹುಂಜ ಎಂಬ ಪದವನ್ನು ಪುರುಷರ ಖಾಸಗಿ ಅಂಗಕ್ಕೆ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ಶಟಲ್ ಕಾಕ್ ಎಂಬ ಬ್ಯಾಡ್ಮಿಂಟನ್ ಪದವನ್ನೇ ತಿರುಚುವ ಮೂಲಕ ಸಿದ್ಧಾರ್ಥ್ ಸೈನಾ, ನೆಹ್ವಾಲ್ರನ್ನು ಲೈಂಗಿಕ ರೀತಿಯಲ್ಲಿ ಅವಮಾನಿಸಲು ಯತ್ನಿಸಿದ್ದರು.
ನಟ ಸಿದ್ಧಾರ್ಥ್ ಮಹಿಳೆಯರ ಸುರಕ್ಷತೆಯ ಕಡೆಗೆ ವಿಶೇಷ ಗಮನ ಇರುವವರಂತೆ ಹಾಗೂ ತಾನೊಬ್ಬ ಸ್ತ್ರೀವಾದಿ ಎಂದು ಈ ಹಿಂದೆ ಅನೇಕ ಬಾರಿ ತೋರಿಸಿಕೊಂಡಿದ್ದರು. ಇಂತಹ ನಟ ದೇಶದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿಯನ್ನು ಲೈಂಗಿಕ ಪದ ಬಳಕೆ ಮಾಡಿ ಹೀಯಾಳಿಸಿದ್ದನ್ನು ಕಂಡು ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.
ಬುಲ್ಲಿ ಬಾಯಿ ಆ್ಯಪ್ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್, ಮಹಿಳೆಯನ್ನು ಅಶ್ಲೀಲವಾಗಿ ತೋರಿಸಲೆಂದೇ ಇಲ್ಲಿ ಅಪ್ಲಿಕೇಶನ್ ನಿರ್ಮಿಸಲಾಗಿದೆ. ಇದನ್ನು ಹೊರತುಪಡಿಸಿ ಇಲ್ಲಿ ಮಿಕ್ಕೆಲ್ಲ ವಿಚಾರಗಳೂ ಅಪ್ರಸ್ತುತವಾಗಿದೆ. ದ್ವೇಷ ಅಥವಾ ಅಪರಾಧವನ್ನು ತರ್ಕಬದ್ಧಗೊಳಿಸುವುದನ್ನು ನಿಲ್ಲಿಸಿ ಎಂದು ಟ್ವೀಟಾಯಿಸಿದ್ದರು. ಈ ಅಪ್ಲಿಕೇಶನ್ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡಿದೆ ಎಂದೂ ಸಿದ್ದಾರ್ಥ್ ಬೇಸರ ವ್ಯಕ್ತಪಡಿಸಿದ್ದರು.
ʼರಂಗ್ ದೇ ಬಸಂತಿʼಯಂತಹ ಕೆಲವು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿರುವ ನಟ ಸಿದ್ಧಾರ್ಥ್ ಆಗಾಗ್ಗೆ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಟೀಕಿಸಿ ಟ್ವೀಟ್ ಮಾಡುತ್ತಾರೆ. ಅವರು ‘ಪ್ರಗತಿಪರ’, ‘ಉದಾರವಾದಿ’ ಎಂದು ಹೇಳಿಕೊಳ್ಳುತ್ತಾರೆ ಆದರೆ ಆಗಾಗ ತಮ್ಮ ರಾಜಕೀಯ ಸಿದ್ಧಾಂತವನ್ನು ಟ್ವೀಟ್ಗಳ ಮೂಲಕ ಸ್ಪಷ್ಟಪಡಿಸುತ್ತಾರೆ.
ಸೈನಾ ನೆಹ್ವಾಲ್ ಅವರ ಟ್ವೀಟ್ ಪ್ರಧಾನಿಯವರ ಸುರಕ್ಷತೆ ಮತ್ತು ಪಂಜಾಬ್‌ನಲ್ಲಿ ಪ್ರಧಾನಿ ಎದುರಿಸಿದ ಇತ್ತೀಚಿನ ಭದ್ರತಾ ಲೋಪದ ಬಗ್ಗೆ ಆಗಿತ್ತು. ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರ ಮೇಲೆ ಇಷ್ಟು ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸಲು ಮತ್ತು ಸಿದ್ಧಾರ್ಥ್ ಇಷ್ಟು ಕೆಳಗೆ ಏಕೆ ಇಳಿದರು..? ಬಹುಶಃ ಸೈನಾ ನೆಹ್ವಾಲ್ ಪ್ರಧಾನಿ ಭದ್ರತೆಯ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಸಿದ್ದಾರ್ಥ್ ಇಷ್ಟೊಂದು ಆಕ್ರೋಶಗೊಂಡಿರಬಹುದೇ ಎಂದು ಶಂಕಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ವಿಚ್ಚೇದನದ ಬಳಿಕವೂ ಟ್ವೀಟ್ ಮಾಡಿ ಸಿದ್ದಾರ್ಥ್ ಸುದ್ದಿಯಾಗಿದ್ದರು. ಸ್ಟಾರ್ ದಂಪತಿಯ ವಿಚ್ಚೇದನದ ಸುದ್ದಿ ಹೊರಬೀಳುತ್ತಿದ್ದಂತೆಯೇ ಮೋಸಗಾರರಿಗೆ ಎಂದೂ ಏಳ್ಗೆಯಾಗೋದಿಲ್ಲ ಎಂದು ಟ್ವೀಟಾಯಿಸಿ ನಟಿ ಸಮಂತಾಗೆ ಟಾಂಗ್ ನೀಡಿದ್ದರು. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.