ಸೈಂಟ್ ಟಿ.ಎಲ್. ವಾಸ್ವಾನಿ ಅವರ ಜನ್ಮದಿನದ ನಿಮಿತ್ತ ಶಿವಮೊಗ್ಗದಲ್ಲಿ ನವೆಂಬರ್ 25ರ ನಾಳೆ ಪ್ರಾಣಿವಧೆ ಮತ್ತು ಮಾಂಸ ಹೋರಾಟವನ್ನು ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾಂಸ ಮಾರಾಟ ಮಾಡುವ ಮಾಲೀಕರು ಅಂದು ತಮ್ಮ ಉದ್ದಿಮೆಯನ್ನು ಸ್ಥಗಿತಗೊಳಿಸಬೇಕೆಂದು ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ತಿಳಿಸಿದ್ದಾರೆ.
ಒಂದೊಮ್ಮೆ ಈ ಆದೇಶವನ್ನು ಉಲ್ಲಂಘಿಸಿ ಮಾಂಸ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.