ದಿನಕ್ಕೊಂದು ಸೇಬು ತಿಂದು ಅನಾರೋಗ್ಯದಿಂದ ದೂರವಿರಿ. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೇಬು ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಪೊಟ್ಯಾಸಿಯಮ್ ಮತ್ತು ಫೈಬರ್ ಸೇಬುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
ಸೇಬುವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ತಡರಾತ್ರಿ ಆಹಾರ ಸೇವನೆ ಮಾಡಿದ ತಕ್ಷಣ ನಿದ್ರೆ ಮಾಡಿದ್ರೆ ಜೀರ್ಣಕ್ರಿಯೆ ಸರಿಯಾಗದೆ ಬೆಳಿಗ್ಗೆ ದಣಿವು ಕಾಡುತ್ತದೆ. ಇಂಥ ಸಂದರ್ಭದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣನ್ನು ಸೇವನೆ ಮಾಡಬೇಕು. ಇದು ಇಡೀ ದಿನ ದೇಹದಲ್ಲಿ ಶಕ್ತಿ ಇರುವಂತೆ ನೋಡಿಕೊಳ್ಳುತ್ತದೆ. ಎಸಿಡಿಟಿಯನ್ನು ಕಡಿಮೆ ಮಾಡುತ್ತದೆ.
ಸೇಬು ಸೇವನೆ ಮಾಡುವ ಮೊದಲು ಬೆಚ್ಚಗಿನ ನೀರಿನಲ್ಲಿ ಸೇಬುವನ್ನು ತೊಳೆಯಬೇಕು. ಸೇಬುವನ್ನು ಸಿಪ್ಪೆ ಸಮೇತ ಸೇವನೆ ಮಾಡಬೇಕು. ಸಿಪ್ಪೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ದೈಹಿಕವಾಗಿ ದುರ್ಬಲವಾಗಿದ್ದರೆ ಅಥವಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಬೆಳಗ್ಗೆ ಎರಡು ಸೇಬು ಹಣ್ಣನ್ನು ತಿನ್ನಬೇಕು.
ಸೇಬುವನ್ನು ಬೇರೆ ಬೇರೆ ರೀತಿಯಲ್ಲಿ ಸೇವನೆ ಮಾಡಬಹುದು. ಕೇಕ್, ಓಟ್ಸ್ ಜೊತೆ ಸಲಾಡ್ ರೀತಿಯಲ್ಲಿ, ಜಾಮ್ ರೀತಿಯಲ್ಲೂ ಸೇಬುವನ್ನು ಸೇವನೆ ಮಾಡಬಹುದು. ಆಪಲ್ ವಿನೆಗರ್ ಕೂಡ ಒಳ್ಳೆಯದು. ಇದು ಚಯಾಪಚಯವನ್ನು ಸುಗಮಗೊಳಿಸುವ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.