ಪ್ರವಾಸಿ ಸ್ಥಳಗಳು ಸುಲಿಗೆಯ ತಾಣವಾಗುತ್ತಿರುವುದು ಹೊಸ ಸಂಗತಿ ಏನಲ್ಲ. ಪ್ರವಾಸಿಗರಿಂದ ಹಣ ಸುಲಿಗೆ ಮಾಡಲು ಬಹುತೇಕರು ಯತ್ನಿಸುತ್ತಾರೆ. ಅಲ್ಲದೆ ಪ್ರತಿಯೊಂದಕ್ಕೂ ಶುಲ್ಕ ವಸೂಲಿ ಮಾಡುವ ಮೂಲಕ ಪ್ರವಾಸವನ್ನು ಅಸಹನೀಯವಾಗಿಸುತ್ತಾರೆ.
ಈಗ ಅಂತಹ ಮತ್ತೊಂದು ಘಟನೆ ನಡೆದಿದ್ದು, ಉಡುಪಿ ಸಮೀಪದ ಮಲ್ಪೆಯ ಪ್ರಮುಖ ಪ್ರವಾಸಿ ತಾಣ ಸೇಂಟ್ ಮೇರಿ ದ್ವೀಪಕ್ಕೆ ಹೋಗಿದ್ದ ಬ್ಲಾಗರ್ ಒಬ್ಬರು ಅಲ್ಲಿನ ಸಿಬ್ಬಂದಿಯ ಅನುಚಿತ ವರ್ತನೆಯನ್ನು ವಿಡಿಯೋದಲ್ಲಿ ತೆರೆದಿಟ್ಟಿದ್ದಾರೆ. ಸಖತ್ ಕಂಟೆಂಟ್ಸ್ ಬ್ಲಾಗರ್ ರೋಹಿತ್ ಸೇಂಟ್ ಮೇರಿಸ್ ದ್ವೀಪದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ರೋಹಿತ್ ಅವರು ಸೋಲೊ ಬೈಕ್ ರೈಡರ್ ಆಗಿದ್ದು ದ್ವೀಪ ಪ್ರವೇಶಕ್ಕೂ ಮುನ್ನ ಗೇಟ್ ಬಳಿಯೇ ಎಲ್ಲ ಮಾಹಿತಿ ಕೇಳಿದ್ದರು. ಈ ವೇಳೆ ಫೋಟೋ – ವಿಡಿಯೋ ಮಾಡಲು ನೂರು ರೂಪಾಯಿ ಶುಲ್ಕ ಎಂದು ಹೇಳಿದ್ದು, ಅದನ್ನು ಪಾವತಿಸಿದ್ದರು. ದ್ವೀಪದ ಒಳಗೆ ಹೋದಾಗ ಕ್ಯಾಮರಾಗೆ ಮತ್ತೆ 200 ರೂಪಾಯಿ ನೀಡಬೇಕೆಂದು ಸಿಬ್ಬಂದಿ ಕೇಳಿದ್ದಾರೆ. ಇದನ್ನು ಪ್ರಶ್ನಿಸಿದ ವೇಳೆ ರೋಹಿತ್ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.