ಸೆಪ್ಟಂಬರ್ 26ರಂದು ಖಗೋಳದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದ್ದು, ಅಂದು ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರು ಭೂಮಿಗೆ ಸಮೀಪ ಬರಲಿದೆ.
ಎಪ್ಪತ್ತು ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಈ ವಿದ್ಯಮಾನ ಸಂಭವಿಸಲಿದೆ ಎಂದು ಹೇಳಲಾಗಿದ್ದು, ಸೆಪ್ಟೆಂಬರ್ 26ರ ಸೋಮವಾರದಂದು ಸೂರ್ಯಾಸ್ತವಾದ ಬಳಿಕ ಪೂರ್ವದಲ್ಲಿ ಗುರು ಗ್ರಹ ಕಾಣಿಸಿಕೊಳ್ಳಲಿದೆ.
ಭೂಮಿಯಿಂದ ಸೂರ್ಯ ಮತ್ತು ಗುರು ಗ್ರಹ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ಸಹ ಕಕ್ಷೆಯಲ್ಲಿನ ವ್ಯತ್ಯಾಸದಿಂದಾಗಿ ಗುರು ಗ್ರಹ ಭೂಮಿಗೆ ಸಮೀಪವಾಗಿ ಕಾಣಿಸುತ್ತದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.