ಸೆಲ್ಫಿ ಗೀಳಿನಿಂದಾಗಿ ಅವಘಡಗಳು ಸಂಭವಿಸುತ್ತಲೆ ಇದ್ದು, ಮತ್ತೊಮ್ಮೆ ಮರುಕಳಿಸಿದೆ. ವಿಹಾರಕ್ಕೆಂದು ಸ್ನೇಹಿತರೊಂದಿಗೆ ಬಂದಿದ್ದ ಟೆಕ್ಕಿ ಒಬ್ಬರು ಸೆಲ್ಫಿ ತೆಗೆದುಕೊಳ್ಳುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಭಾನುವಾರದಂದು ಕನಕಪುರ ತಾಲೂಕಿನ ಚುಂಚಿ ಫಾಲ್ಸ್ ನಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತರೊಂದಿಗೆ ಬಂದಿದ್ದ ಬೆಂಗಳೂರು ಶಂಕರ ಮಠ ರಸ್ತೆ ವಾಸಿ 26 ವರ್ಷದ ಪ್ರವೀಣ್ ಚಂದ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರವೀಣ್ ಚಂದ್ರ ಸ್ನೇಹಿತರೊಂದಿಗೆ ವಿಹಾರಕ್ಕೆ ಬಂದಿದ್ದು, ಬಂಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋದ ಅವರ ಶವವನ್ನು ಅಗ್ನಿಶಾಮಕ ದಳದವರು ಪರಿಣಿತ ಈಜುಗಾರರ ನೆರವಿನಿಂದ ಪತ್ತೆ ಹಚ್ಚಿದ್ದಾರೆ.