ಹಲವಾರು ಜನರಿಗೆ ತಾನು ಸೆಲೆಬ್ರಿಟಿಗಳ ತರಹ ಇರಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೆ ಸೆಲೆಬ್ರಿಟಿಗಳನ್ನು ಹಿಂಬಾಲಿಸಿ ಅವರ ಜೊತೆ ಫೋಟೋ ತೆಗೆದುಕೊಳ್ಳುವುದು, ಅವರನ್ನೇ ಅನುಕರಿಸುವುದು ಮುಂತಾದವುಗಳನ್ನು ಅನೇಕರು ಮಾಡುತ್ತಾರೆ. ಆದರೀಗ ಹೊಸ ಅಧ್ಯಯನ ವರದಿಯೊಂದು ಶಾಕಿಂಗ್ ವಿಚಾರವನ್ನು ಹೊರಹಾಕಿದೆ.
ಹೌದು, ಸೆಲೆಬ್ರಿಟಿಗಳ ಗೀಳನ್ನು ಹೊಂದಿರುವ ಜನರು ಕಡಿಮೆ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ ಅಧ್ಯಯನ ವರದಿ ತಿಳಿಸಿದೆ. ಇದರ ಪ್ರಕಾರ, ಇಂತಹ ಜನರು ಕಡಿಮೆ ಅರಿವಿನ ಕಾರ್ಯಕ್ಷಮತೆಯನ್ನು ಹೊಂದಿರುತ್ತಾರೆ.
ಇದಕ್ಕಾಗಿ 1763 ಮಂದಿ ಹಂಗೇರಿಯಾದ ವಯಸ್ಕರ ಗುಂಪಿನ ಮೇಲೆ ಪ್ರಯೋಗ ನಡೆಸಲಾಗಿದೆ. ಶಿಕ್ಷಣ ಮಟ್ಟ, ಕುಟುಂಬದ ಆದಾಯ, ವಸ್ತು, ಸಂಪತ್ತು ಮತ್ತು ಸ್ವಾಭಿಮಾನದಂತಹ ಇತರ ಮಾಹಿತಿಯನ್ನು ಇವರಿಂದ ಸಂಗ್ರಹಿಸಲಾಗಿದೆ. ಅಲ್ಲದೆ ಇವರಿಗೆ ಸೆಲೆಬ್ರಿಟಿ ಆಟಿಟ್ಯೂಡ್ ಸ್ಕೇಲ್ ಪ್ರಶ್ನಾವಳಿಯನ್ನು ಪೂರ್ಣಗೊಳಿಸುವಂತೆ ಕೇಳಲಾಯಿತು.
ಸೆಲೆಬ್ರಿಟಿ ಆಟಿಟ್ಯೂಡ್ ಸ್ಕೇಲ್‌ನಲ್ಲಿ ಬಹುತೇಕ ಮಂದಿ ಕಡಿಮೆ ಕಾರ್ಯಕ್ಷಮತೆ ಹೊಂದಿದ್ದಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸೆಲೆಬ್ರಿಟಿ ಆರಾಧನೆಯಂತಹ ಅತಿಯಾದ ನಡವಳಿಕೆಗಳು ಅರಿವಿನ ಕಾರ್ಯಚಟುವಟಿಕೆಯನ್ನು ಸಂಭಾವ್ಯವಾಗಿ ದುರ್ಬಲಗೊಳಿಸಬಹುದು ಎಂದು ಹೇಳಲಾಗಿದೆ.