ಬಹುಬೇಡಿಕೆಯುಳ್ಳ ಮೋಟಾರ್ ಸೈಕಲ್ ತಯಾರಕ ಕಂಪನಿ ರಾಯಲ್ ಎನ್‌ಫೀಲ್ಡ್, ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ಜರಿ ವಹಿವಾಟು ನಡೆಸಿದೆ. ರಾಯಲ್ ಎನ್‌ಫೀಲ್ಡ್‌ನ ಒಟ್ಟು 82,097 ಯುನಿಟ್‌ಗಳು ಸೆಪ್ಟೆಂಬರ್‌ನಲ್ಲಿ ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 33,529 ಬೈಕ್‌ಗಳು ಸೇಲ್ ಆಗಿದ್ದವು.
ಕಳೆದ ವರ್ಷಕ್ಕೆ ಹೋಲಿಸಿದ್ರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟ ಈ ಬಾರಿ ದುಪ್ಪಟ್ಟಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ, ದೇಶೀಯ ಮಾರಾಟವು 27,233 ಇತ್ತು. ಕಳೆದ ತಿಂಗಳು ಈ ಸಂಖ್ಯೆ 73,646 ಯುನಿಟ್‌ಗಳಷ್ಟಾಗಿದೆ. ಇದೇ ಮಾದರಿಯಲ್ಲಿ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 6,296 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಈ ಬಾರಿ 8,451 ಯುನಿಟ್‌ಗಳು ರಫ್ತಾಗಿವೆ.
ಇದೇ ರೀತಿ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೆಟ್ ಲಿಮಿಡೆಟ್ ಕಂಪನಿಯ ಒಟ್ಟು ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇ. 27.55ರಷ್ಟು ಏರಿಕೆಯಾಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಕಂಪನಿಯು 68,012 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಸೆಪ್ಟೆಂಬರ್ 2022ರಲ್ಲಿ, ದೇಶೀಯ ಮಾರಾಟವು 72,012 ಯುನಿಟ್‌ಗಳಾಗಿದ್ದರೆ, 14,738 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. 2006ರಲ್ಲಿ ಇಡೀ ವರ್ಷದಲ್ಲಿ ಇಷ್ಟು ವಹಿವಾಟು ನಡೆದಿತ್ತು.
ಆದಾಗ್ಯೂ ಭಾರತದ ಇತರ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ಮಾರಾಟ ಸೆಪ್ಟೆಂಬರ್ನಲ್ಲಿ ಶೇ.1.95 ರಷ್ಟು ಕುಸಿದು 5,19,980 ಯುನಿಟ್‌ಗಳಿಗೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 5,30,346 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ದೇಶೀಯ ಮಾರಾಟ ಕೊಂಚ ಏರಿಕೆ ಕಂಡಿದೆ. ಆದ್ರೆ ರಫ್ತು ಇಳಿಕೆಯಾಗಿದೆ. ಹಬ್ಬಗಳ ಸೀಸನ್ ಆರಂಭವಾಗಿರುವುದರಿಂದ ಬೇಡಿಕೆ ಹೆಚ್ಚಬಹುದು ಎಂಬ ನಿರೀಕ್ಷೆ ಕಂಪನಿಗಿದೆ.