ಸಂಭೋಗದ ವೇಳೆ ಉತ್ಸುಕರಾದಾಗ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೆಲ ಬದಲಾವಣೆಗಳು ಎಲ್ಲರಿಗೂ ಗೊತ್ತು. ಆದ್ರೆ ಮತ್ತೆ ಕೆಲ ಬದಲಾವಣೆಗಳು ವಿಚಿತ್ರವಾಗಿದ್ದು, ಅನೇಕರಿಗೆ ತಿಳಿದಿರುವುದಿಲ್ಲ.
ಸಂಭೋಗದ ವೇಳೆ ಕೆಲವರಿಗೆ ಟಾಯ್ಲೆಟ್ ಬಂದಂತೆ ಭಾಸವಾಗುತ್ತದೆ. ಸೆಕ್ಸ್ ಮಲ ಬರುವ ಸ್ಥಳದ ಆಸುಪಾಸೆ ನಡೆಯುವುದ್ರಿಂದ ಈ ಸಮಸ್ಯೆ ಅನೇಕರಿಗೆ ಕಾಡುತ್ತದೆ.
ಕೆಲ ಮಹಿಳೆಯರು ಉತ್ಸುಕರಾಗುತ್ತಿದ್ದಂತೆ ಅವ್ರ ಕಣ್ಣಿನಲ್ಲಿ ಬದಲಾವಣೆ ಕಾಣಬಹುದಾಗಿದೆ. ಸೆಕ್ಸ್ ನಲ್ಲಿ ಉತ್ತೇಜನಗೊಂಡ ಮಹಿಳೆಯರ ಕಣ್ಣು ಗುಡ್ಡೆ ಕುಣಿಯಲು ಶುರುವಾಗುತ್ತದೆ. ಕಣ್ಣು ಮುಚ್ಚಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಮೊದಲ ಬಾರಿ ಸಂಭೋಗ ನಡೆಸುತ್ತಿರುವ ಮಹಿಳೆಯರ ಕಣ್ಣಿನ ರೆಪ್ಪೆಗಳು ಹೆಚ್ಚು ಬಾರಿ ಬಡಿದುಕೊಳ್ಳುತ್ತವೆ.
ಕೆಲ ಮಹಿಳೆಯರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಹಣೆಯಿಂದ ಶುರುವಾಗಿ ತಲೆ ಹಿಂಭಾಗದವರೆಗೆ ನೋವು ಕಾಣಿಸಿಕೊಳ್ಳುತ್ತದೆ. ಆರಂಭದಿಂದ ಪರಾಕಾಷ್ಠೆ ತಲುಪುವವರೆಗೂ ಇದು ಕಾಡುತ್ತದೆ. ಮೈಗ್ರೇನ್ ಸಮಸ್ಯೆಯಿರುವ ಮಹಿಳೆಯರಿಗೆ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ.
ಓದಿ, ಕೇಳಿದಂತೆ ನಮ್ಮ ದೇಹದಲ್ಲೂ ಸೆಕ್ಸ್ ವೇಳೆ ಬದಲಾವಣೆಯಾಗ್ತಿದ್ಯಾ ಎಂದು ಅನೇಕರು ಪರೀಕ್ಷೆ ಮಾಡ್ತಾರೆ. ಎಲ್ಲ ಬಾರಿಯೂ ಬದಲಾವಣೆಯಾಗಬೇಕೆಂದೇನೂ ಇಲ್ಲ. ನಿರೀಕ್ಷೆಯಂತೆ ಬದಲಾವಣೆಯಾಗದೆ ಹೋದಲ್ಲಿ ಕಿರಿಕಿರಿ ಅನುಭವಿಸುವವರೂ ಇದ್ದಾರೆ.