ಸಂಭೋಗವನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಪುರುಷರು ತಮ್ಮಿಷ್ಟವನ್ನು ಹೇಗೋ ತೀರಿಸಿಕೊಳ್ತಾರೆ. ಆದ್ರೆ ಮಹಿಳೆಯರು ಲೈಂಗಿಕ ಅತೃಪ್ತಿಗೊಳಗಾಗ್ತಾರೆಯೇ ವಿನಃ ಹೇಳಿಕೊಳ್ಳುವುದಿಲ್ಲ.
ಮಹಿಳೆಯರ ಲೈಂಗಿಕ ಸಮಸ್ಯೆ ಬಗ್ಗೆ ನಡೆದ ಸಮೀಕ್ಷೆಯೊಂದರ ಪ್ರಕಾರ, ಶೇಕಡಾ 54 ರಷ್ಟು ಮಹಿಳೆಯರು ಪರಾಕಾಷ್ಠೆಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಾರಂತೆ. ಶೇಕಡಾ 36 ರಷ್ಟು ಮಹಿಳೆಯರಿಗೆ ಲೈಂಗಿಕ ನಿರಾಸಕ್ತಿ ಕಾಡುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ.
ತಜ್ಞರ ಪ್ರಕಾರ, ಪ್ರತಿ ಬಾರಿ ಸಂಭೋಗದ ವೇಳೆ ಪರಾಕಾಷ್ಠೆ ಸಿಗುವುದಿಲ್ಲ. ಕೆಲವೊಮ್ಮೆ ಮಹಿಳೆಯರೇ ಇದಕ್ಕೆ ಕಾರಣವಾಗ್ತಾರೆ. ಸೆಕ್ಸ್ ಗಿಂತ ಮೊದಲು ಪ್ಲೋರಲ್ ಹಾಗೂ ಮಸಾಜ್ ಅತ್ಯಗತ್ಯ. ಪುರುಷರಂತೆ ಮಹಿಳೆಯರು ಕ್ಲೈಮ್ಯಾಕ್ಸ್ ತಲುಪಿದಾಗ ಮಾತ್ರ ಲೈಂಗಿಕ ಸುಖ ಸಾಧ್ಯ ಎನ್ನುತ್ತಾರೆ.
ಸೆಕ್ಸ್ ವೇಳೆ ಕೈಯನ್ನು ಬದಿಗಿಟ್ಟುಕೊಳ್ಳುವುದು ಕೆಲ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಇದು ಸಂಭೋಗವನ್ನು ಕೆಲವೊಮ್ಮೆ ಬೋರ್ ಎನ್ನಿಸುವಂತೆ ಮಾಡುತ್ತದೆ. ಹಾಗಾಗಿ ಕೈಗೆ ಕೆಲಸ ಕೊಡುವುದು ಒಳ್ಳೆಯದು. ಸಂಗಾತಿ ದೇಹದ ಮೇಲೆ ಕೈ ಆಡಿಸುತ್ತಿದ್ದರೆ ಉತ್ತೇಜನ ಹೆಚ್ಚಾಗುತ್ತದೆ. ಕೂದಲಿನ ಜೊತೆ ಕೂಡ ಆಟವಾಡಬಹುದು.
ಸಂಗಾತಿಗಳಿಬ್ಬರ ಸೆಕ್ಸ್ ಇಚ್ಛೆ ಒಂದೇ ಇರಬೇಕೆಂದೇನಿಲ್ಲ. ಬೇರೆ ಬೇರೆಯಾಗಿರುವುದು ಸಾಮಾನ್ಯ. ಇಬ್ಬರು ಪರಸ್ಪರ ಮಾತನಾಡಿಕೊಂಡು ಸಂಭೋಗ ಬೆಳೆಸಬೇಕು. ಆಗ ಮಾತ್ರ ಇಬ್ಬರಿಗೂ ಸಂತೃಪ್ತಿ ಸಿಗಲು ಸಾಧ್ಯ.