ಈ ಆಧುನಿಕ ಕಾಲದಲ್ಲಿ ಯಾರಿಗೆ ಒತ್ತಡವಿಲ್ಲ. ಅದ್ರಲ್ಲೂ ಕೆಲಸಕ್ಕೆ ಹೋಗುವ ಮಂದಿಗೆ ಒತ್ತಡ ಜಾಸ್ತಿ. ಕಚೇರಿ ಕೆಲಸಗಳು ಒತ್ತಡ ಹೆಚ್ಚು ಮಾಡುತ್ತವೆ. ಅದು ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈಗಿನ ಕಚೇರಿ ಕೆಲಸದ ವಿಧಾನದಿಂದ ನೌಕರರು ಬಹುತೇಕ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತಾರೆ. ಇದ್ರಿಂದ ಸೆಕ್ಸ್ ಗೆ ಸಮಯ ನೀಡಲಾಗುವುದಿಲ್ಲ.
ಕೆಲಸ ಹೆಚ್ಚಾದಂತೆ ಕಾರ್ಟಿಸಲ್ ಹಾರ್ಮೋನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಹೆಚ್ಚು ಮಾಡುತ್ತದೆ. ಮನೋವಿಜ್ಞಾನಿಗಳ ಪ್ರಕಾರ, ಸೆಕ್ಸ್ ದಾಂಪತ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಂಬಂಧ ಗಟ್ಟಿಯಾಗಿರಲು ಇದು ಅತ್ಯಗತ್ಯ. ಕೆಲಸದ ಕಾರಣ ಸೆಕ್ಸ್ ಗೆ ಜಾಗವಿಲ್ಲದೆ ಹೋದ್ರೆ ಸಂಬಂಧ ಹಳಸಲು ಶುರುವಾಗುತ್ತದೆ.
ಕೆಲಸ ಹೆಚ್ಚಾದಂತೆ ಕಚೇರಿಯಲ್ಲಿ ಕಾಲ ಕಳೆಯುವುದು ಹೆಚ್ಚಾಗುತ್ತದೆ. ಮನೆಗೆ ಬರ್ತಿದ್ದಂತೆ ಸುಸ್ತು ನಿಮ್ಮನ್ನು ಕಾಡುತ್ತದೆ. ಒತ್ತಡ ಹೆಚ್ಚಾಗ್ತಿದ್ದಂತೆ ನಿಧಾನವಾಗಿ ಕಾಮಾಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಕೆಲವರು ಬೆಳಿಗ್ಗೆ 5 ಗಂಟೆಗೆ ಎದ್ದು 12 ಗಂಟೆಗಳ ಕಾಲ ಕೆಲಸ ಮಾಡ್ತಾರೆ. ಮತ್ತೆ ಕೆಲವರು ಮಧ್ಯಾಹ್ನದ ಊಟ ಬಿಡ್ತಾರೆ. ಮತ್ತೆ ಕೆಲವರು ಕೆಲಸಕ್ಕಾಗಿ 30-40 ಕಿಲೋಮೀಟರ್ ಪ್ರತಿದಿನ ಪ್ರಯಾಣ ಬೆಳೆಸ್ತಾರೆ. ಇದೆಲ್ಲ ಸೆಕ್ಸ್ ಮೇಲೆ ಪ್ರಭಾವ ಬೀರುತ್ತದೆ.