ಮದುವೆಯ ಹೆಸರಿನಲ್ಲಿ ದೈಹಿಕ ಸಂಬಂಧ ಬೆಳೆಸಿ, ನಂತ್ರ ಮದುವೆಯಾಗಲು ನಿರಾಕರಿಸುವುದು ಇನ್ಮುಂದೆ ಯಾವುದೇ ರೀತಿಯ ಮೋಸವಾಗುವುದಿಲ್ಲ. ಯಸ್, ಇಂಥ ಮಹತ್ವದ ಹೇಳಿಕೆಯನ್ನು ಬಾಂಬೆ ಹೈಕೋರ್ಟ್ ನೀಡಿದೆ.
ಪಾಲ್ಘರ್ ನಿವಾಸಿ ಕಾಶಿನಾಥ್ ಘರತ್ ಗೆಳತಿ ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ. ಗೆಳತಿ ದೂರಿನ ಮೇಲೆ ಪೊಲೀಸರು ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದರು. ಮದುವೆಯ ಭರವಸೆ ನೀಡಿ ಕಾಶಿನಾಥ್ ದೈಹಿಕ ಸಂಬಂಧ ಬೆಳೆಸಿ ನಂತರ ಮದುವೆಯಾಗಲು ನಿರಾಕರಿಸಿದ್ದ ಎಂದು ಗೆಳತಿ ಆರೋಪಿಸಿದ್ದಳು.
ಫೆಬ್ರವರಿ 19, 1999 ರಂದು ಆರೋಪಿಯ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಕೈಬಿಡಲಾಗಿತ್ತು. ವಂಚನೆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ, ಏಕ ಪೀಠ ಕಾಶಿನಾಥ್ ಪ್ರಕರಣವನ್ನು ಖುಲಾಸೆಗೊಳಿಸಿದೆ.
ಮಹಿಳೆ ಹೇಳಿಕೆ, ಆಕೆಗೆ ಯಾವುದೇ ವಂಚನೆಯಾಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಆದ್ದರಿಂದ, ಮದುವೆ ಭರವಸೆ ನೀಡಿ ಮದುವೆ ನಿರಾಕರಿಸುವುದು ಅಪರಾಧವಲ್ಲ ಎಂದಿದೆ. ಆರೋಪಿ, ಮಹಿಳೆಗೆ ತಪ್ಪು ಮಾಹಿತಿ ನೀಡಿ, ಲೈಂಗಿಕ ಸಂಬಂಧಕ್ಕೆ ಒಪ್ಪಿಸಿದ್ದಾನೆ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂದಿದೆ.