ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆಯುತ್ತವೆ. ಈ ಅಧ್ಯಯನ, ಸಂಶೋಧನೆಗಳು ಆರೋಗ್ಯ ರಕ್ಷಣೆಗೆ ಸಹಾಯವಾಗುತ್ತವೆ.
ಆರೋಗ್ಯ ವೃದ್ಧಿಗೆ ಯಾವ ಕೆಲಸ ಮಾಡಬೇಕು, ಯಾವ ಕೆಲಸ ಮಾಡಬಾರದು ಎಂಬುದು ಸಂಶೋಧನೆಯಿಂದ ನಾವು ತಿಳಿದುಕೊಳ್ಳಬಹುದು.
ಇತ್ತೀಚೆಗೆ ಶಾರೀರಿಕ ಸಂಬಂಧ ಬೆಳೆಸುವ ಬಗ್ಗೆ ನಡೆದ ಸಂಶೋಧನೆಯೊಂದು ಸೆಕ್ಸ್ ನಂತ್ರ ಮಹಿಳೆಯರು ಯಾವ ಕೆಲಸ ಮಾಡಬಾರದು ಎಂಬುದನ್ನು ಹೇಳಿದೆ. ಸೆಕ್ಸ್ ನಂತ್ರ ಮಹಿಳೆಯರು ಅಪ್ಪಿತಪ್ಪಿ ಆ ಕೆಲಸ ಮಾಡಿದ್ರೆ ಗುಪ್ತಾಂಗ ಖಾಯಿಲೆ, ಸೋಂಕು ಅವ್ರನ್ನು ಕಾಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಸಾಬೂನು ಬಳಸಬಾರದು : ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಬಹುತೇಕ ಮಹಿಳೆಯರು ಖಾಸಗಿ ಅಂಗವನ್ನು ಸ್ವಚ್ಛಗೊಳಿಸಿಕೊಳ್ತಾರೆ. ಖಾಸಗಿ ಅಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಆದ್ರೆ ಇದಕ್ಕೆ ಸೋಪನ್ನು ಬಳಸಬಾರದು. ಸೋಪ್ ನಲ್ಲಿರುವ ರಾಸಾಯನಿಕ ಖಾಸಗಿ ಅಂಗವನ್ನು ಶುಷ್ಕಗೊಳಿಸುವ ಜೊತೆಗೆ ಸೋಂಕಿಗೆ ಕಾರಣವಾಗುತ್ತದೆ.
ಬಾತ್ ರೂಂಗೆ ಹೋಗಬೇಕು : ಸಂಬಂಧ ಬೆಳೆಸಿದ ನಂತ್ರ ಖಾಸಗಿ ಅಂಗದಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ. ಅವು ಮೂತ್ರನಾಳದ ಮೂಲಕ ಮೂತ್ರಕೋಶ ಸೇರುವ ಸಾಧ್ಯತೆಯಿರುತ್ತದೆ. ಹಾಗಾಗಿ ಸೆಕ್ಸ್ ತಕ್ಷಣ ಮೂತ್ರ ವಿಸರ್ಜನೆ ಮಾಡಬೇಕೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಪಾಲಿಎಸ್ಟರ್ ಒಳ ಉಡುಪು ಬೇಡ : ಶಾರೀರಿಕ ಸಂಬಂಧ ಬೆಳೆಸುವ ವೇಳೆ ಬೆವರು ಬರುವುದು ಸಾಮಾನ್ಯ ಸಂಗತಿ. ಪಾಲಿಎಸ್ಟರ್ ಸೇರಿದಂತೆ ನೈಲಾನ್ ಒಳ ಉಡುಪು ಧರಿಸಿದ್ರೆ ಬೆವರು ದೇಹದಿಂದ ಹೋಗದೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಾಟನ್ ಒಳ ಉಡುಪನ್ನು ಹಾಕಬೇಕು.