ಇತ್ತೀಚೆಗೆ ದಿನಕ್ಕೊಬ್ಬರು ಕಾರು ತಯಾರಕರು ತಮ್ಮ ವಾಹನಗಳ ಬೆಲೆ ಹೆಚ್ಚಿಸುತ್ತಿದ್ದಾರೆ. ಅದ್ರಲ್ಲೂ ಕೊರೋನಾ ಸಂದರ್ಭದಲ್ಲಿ ಆದಾಯ ಕಡಿಮೆಯಾಗಿ, ಖರ್ಚು ಹೆಚ್ಚಾಗಿರುವಾಗ ಕಡಿಮೆ ಬೆಲೆಗೆ ಉತ್ತಮ ಸ್ಥಿತಿಯಲ್ಲಿರುವ ಬಳಸಿದ ವಾಹನಗಳನ್ನ ಖರೀದಿಸುವುದೇ ಜಾಣತನ.
ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್
ದ್ವಿಚಕ್ರಗಳಿಗಿಂತ ಕಾರುಗಳು ಸುರಕ್ಷಿತ
ಬಜೆಟ್ ನಿರ್ಬಂಧಗಳ ಕಾರಣದಿಂದಾಗಿ, ಅನೇಕರು ದ್ವಿಚಕ್ರ ವಾಹನಗಳತ್ತ ಒಲವು ತೋರುತ್ತಾರೆ. ಇಲ್ಲವೇ ಹೊಸ ಕಾರನ್ನು ಖರೀದಿಸಲು ಹೆಚ್ಚು ಸಮಯ ಕಾಯುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನ ಅವಲಂಬಿಸುವುದು ಅಥವಾ ದ್ವಿಚಕ್ರ ವಾಹನವನ್ನು ಬಳಸುವುದು ಸ್ವಂತ ಕಾರಿನಷ್ಟು ಸುರಕ್ಷಿತವಲ್ಲ. ಬಳಸಿದ ಕಾರ್ ಆದರೂ ನಾಲ್ಕು ಚಕ್ರಗಳ ಸುರಕ್ಷತೆ ಜೊತೆಗೆ, ನಿಮ್ಮ ತಲೆಯ ಮೇಲೆ ಛಾವಣಿ ಇರುವುದು ಉತ್ತಮ ಅಲ್ಲವೇ.
ಮೂವ್ ಅಪ್
ಯೂಸ್ಡ್ ಕಾರುಗಳ ಮಾರುಕಟ್ಟೆಯು ನಿಮ್ಮ ಬಜೆಟ್ಗೆ ಸಾಕಷ್ಟು ಆಯ್ಕೆಗಳನ್ನ ನೀಡುತ್ತದೆ. ಕಡಿಮೆ ಬಜೆಟ್ ನಲ್ಲೆ ಒಳ್ಳೆ ರೇಂಜ್ ನ ವಾಹನಗಳನ್ನ ಖರೀದಿಸಬಹುದು. 5 ಲಕ್ಷ ಬಜೆಟ್ ನಲ್ಲಿ ಪ್ರೀಮಿಯಂ ಸೆಡಾನ್ ನಿಂದ ಹಿಡಿದು ಮಧ್ಯಂತರ SUVಯನ್ನ ಖರೀದಿಸಬಹುದು. ಪ್ರತಿಯೊಂದು ಬಜೆಟ್ಗೆ ಪ್ರತಿಯೊಂದು ಶೈಲಿಯಲ್ಲಿ ವಾಹನಗಳು ಲಭ್ಯವಿರುವುದರಿಂದ ಆಯ್ಕೆಯು ಸಂಪೂರ್ಣವಾಗಿ ಖರೀದಿದಾರರ ಬಳಿಯಿರುತ್ತದೆ.
ಹೊಸ ಕಾರುಗಳನ್ನು ಡೆಲಿವರಿ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿದೆ
ಸಾಂಕ್ರಾಮಿಕ ರೋಗವು ಆಟೋಮೊಬೈಲ್ ಉದ್ಯಮಕ್ಕೆ ನೀಡಿದ ದೊಡ್ಡ ಹೊಡೆತವೆಂದರೆ ಸೆಮಿಕಂಡಕ್ಟರ್ ಕೊರತೆ. ಇದು ದೇಶದ ಪ್ರತಿಯೊಂದು ಕಾರು, ಬೈಕ್ ತಯಾರಕರ ಮೇಲೆ ಪರಿಣಾಮ ಬೀರಿದೆ. ನಿಮಗಿಷ್ಟದ ಮಾಡೆಲ್ ಗಳನ್ನ ಇಂದು ಬುಕ್ ಮಾಡಿದರೆ ಅದರ ಕೀ ನಿಮ್ಮ ಕೈಸೇರಲು ತಿಂಗಳುಗಳೆ ಹಿಡಿಯುತ್ತದೆ. ಕೆಲ ಕಂಪನಿಯವರು ವರ್ಷಗಟ್ಟಲೆ ಕಾಯುಸುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಸೆಕೆಂಡ್ ಹ್ಯಾಂಡ್ ಕಾರುಗಳ ತಕ್ಷಣ ಕೈ ಸೇರುತ್ತವೆ. ಸೋ, ಹೊಸ ಕಾರಿಗಾಗಿ ಕ್ಯೂನಲ್ಲಿ ನಿಂತು ಕಾಯುವ ಬದಲು ಯೂಸ್ಡ್ ಕಾರ್ ಖರೀದಿಸಿ ಓಡಾಡುವುದು ಉತ್ತಮ.
ಕಾರ್ ಚಾಲನೆಯಲ್ಲಿ ಕೌಶಲ್ಯ ಹೊಂದಲು ಬಳಸಿದ ಕಾರ್ ಬೆಸ್ಟ್
ಕಾರುಗಳನ್ನ ಓಡಿಸಲು ಹೊಸದಾಗಿ ಕಲಿಯುವಾಗ ಮಿಸ್ಟೇಕ್ ಗಳಾಗುವುದು ಸಾಮಾನ್ಯ. ಈ ಪ್ರಕ್ರಿಯೆಯಲ್ಲಿ ನಿಮ್ಮ ಬಳಿ ಯೂಸ್ಡ್ ಕಾರ್ ಇದ್ದರೆ ಹೊಚ್ಚಹೊಸ ಕಾರನ್ನು ಹಾಳುಮಾಡುವ ಬಗ್ಗೆ ಚಿಂತಿಸದೆಯೇ ನಿಮ್ಮ ಚಾಲನಾ ಕೌಶಲ್ಯವನ್ನು ವೃದ್ಧಿಗೊಳಿಸಬಹುದು.