
ಭಾರತದಲ್ಲಿ ಹೊಸ ಕಾರುಗಳು ಮಾರಾಟವಾಗುವುದಕ್ಕಿಂತ ಹೆಚ್ಚು ಹಳೆಯ ಕಾರುಗಳ ಖರೀದಿ ಜೋರಾಗಿರುತ್ತದೆ. ಕೆಲವರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸಿದರೆ, ಇನ್ನು ಕೆಲವರು ಸಿಎನ್‌ಜಿ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ.
ಸಿಎನ್‌ಜಿ ಕಾರನ್ನು ಖರೀದಿಸುವ ದೊಡ್ಡ ಪ್ರಯೋಜನವೆಂದರೆ, ಪೆಟ್ರೋಲ್, ಡೀಸೆಲ್ ಬಹಳ ದುಬಾರಿಯಾಗಿರುವುದರಿಂದ ವೆಚ್ಚ ಕಡಿತ ಮಾಡಬಹುದು. ಆದರೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಸಿಎನ್‌ಜಿ ಕಾರು ಕೊಂಡುಕೊಳ್ಳುವಾಗ ಸಣ್ಣ ತಪ್ಪು ಮಾಡಿದ್ರೂ ಆಮೇಲೆ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಹಳೆಯ CNG ಕಾರನ್ನು ಖರೀದಿಸುವಾಗ ಕೆಲವು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ವಾಹನವನ್ನು ನಿಕಟವಾಗಿ ಪರೀಕ್ಷಿಸಿ
ಬಳಸಿದ ಸಿಎನ್‌ಜಿ ಕಾರನ್ನು ಖರೀದಿಸುವಾಗ, ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯ. ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ಸಿಎನ್‌ಜಿ ಕಿಟ್ ಅಳವಡಿಸಿದ್ದರೆ, ಗ್ಯಾಸ್ ಸೋರಿಕೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಸಿಲಿಂಡರ್‌ನ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲಿಸಿ. ಭವಿಷ್ಯದಲ್ಲಿ ಯಾವುದೇ ಸಂಭವನೀಯ ಸಮಸ್ಯೆಗಳನ್ನು ತಡೆಗಟ್ಟಲು ಪರಿಣಿತರಿಂದ ಎಂಜಿನ್ ಟ್ಯೂನಿಂಗ್ ಮತ್ತು ಸಿಎನ್‌ಜಿ ಕಿಟ್ ಅನ್ನು ಪರಿಶೀಲಿಸುವುದು ಸಹ ಅವಶ್ಯಕ.
ಫ್ಯಾಕ್ಟರಿ ಅಳವಡಿಸಿದ CNG ಕಾರನ್ನು ಆಯ್ಕೆಮಾಡಿ
ಹಣ ಉಳಿತಾಯದ ಹೆಸರಿನಲ್ಲಿ ಸುರಕ್ಷತೆಗೆ ಎಂದಿಗೂ ಧಕ್ಕೆಯಾಗಬಾರದು. ಆಫ್ಟರ್ ಮಾರ್ಕೆಟ್ ಸಿ ಎನ್ ಜಿ ಕಿಟ್ ಖರೀದಿಸುವ ಬದಲು, ಪ್ರತಿಷ್ಠಿತ ಕಂಪನಿಯಿಂದ ಫ್ಯಾಕ್ಟರಿ ಅಳವಡಿಸಿದ ಸಿ ಎನ್ ಜಿ ಕಿಟ್ ಇರುವ ಕಾರನ್ನು ಖರೀದಿಸಿ. ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸುವಾಗ ದೊಡ್ಡ ಕಂಪನಿಗಳು ಎಂಜಿನ್ ಆರೋಗ್ಯ ಮತ್ತು ಮೈಲೇಜ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತವೆ.
ಇಂಧನ ತುಂಬುವಾಗ ಜಾಗರೂಕರಾಗಿರಿ
ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಇಂಧನ ತುಂಬಿಸುವಾಗ ಸ್ಫೋಟದ ಹಲವಾರು ಘಟನೆಗಳು ನಡೆದಿವೆ. ಆದ್ದರಿಂದ ನಿಮ್ಮ ಸಿಎನ್‌ಜಿ ವಾಹನಕ್ಕೆ ಇಂಧನ ತುಂಬಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸಿಎನ್‌ಜಿ ಸ್ಟೇಷನ್‌ನಲ್ಲಿ ಇಂಧನ ತುಂಬಿಸುವಾಗ, ಕಾರನ್ನು ನಿಲ್ಲಿಸಿ ದೂರದಲ್ಲಿ ಉಳಿಯಲು ಸಲಹೆ ನೀಡಲಾಗುತ್ತದೆ. ಸಾಧ್ಯವಾದಾಗಲೆಲ್ಲಾ ಸಿಲಿಂಡರ್ ಸೋರಿಕೆಯನ್ನು ಸಹ ಪರಿಶೀಲಿಸಿ.