ಜೀವನದಲ್ಲಿ ಸಮಸ್ಯೆ, ಆರ್ಥಿಕ ನಷ್ಟವುಂಟಾದಾಗ ಅದ್ರಿಂದ ಹೊರ ಬರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷಿಗಳ ಮೊರೆ ಹೋಗ್ತಾರೆ. ಮತ್ತೆ ಕೆಲವರು ದಾನ-ಧರ್ಮಕ್ಕೆ ಮುಂದಾಗ್ತಾರೆ. ದಾನ ಮಾಡುವುದ್ರಿಂದ ಪುಣ್ಯ ಲಭಿಸುತ್ತದೆ ನಿಜ. ಆದ್ರೆ ಎಲ್ಲ ವಸ್ತುಗಳನ್ನು ಎಲ್ಲ ಸಮಯದಲ್ಲಿ ದಾನ ಮಾಡುವುದು ಸೂಕ್ತವಲ್ಲ. ಶಾಸ್ತ್ರದ ಪ್ರಕಾರ ಸಂಜೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದು ಶುಭವಲ್ಲ. ಅದ್ರಿಂದ ಧನ ಹಾನಿಯುಂಟಾಗುತ್ತದೆ.
ಈರುಳ್ಳಿ-ಬೆಳ್ಳುಳ್ಳಿಯನ್ನು ಕೇತುವಿಗೆ ಹೋಲಿಕೆ ಮಾಡಲಾಗುತ್ತದೆ. ಕೇತುವನ್ನು ನಕಾರಾತ್ಮಕ ಶಕ್ತಿಯ ಮಾಲೀಕನೆಂದು ಪರಿಗಣಿಸಲಾಗಿದೆ. ತಾಂತ್ರಿಕರು ಮಂತ್ರ ವಿದ್ಯೆಯನ್ನು ಸಂಜೆ ಮಾಡ್ತಾರೆ. ಹಾಗಾಗಿ ಸಂಜೆ ವೇಳೆ ಈರುಳ್ಳಿ-ಬೆಳ್ಳುಳ್ಳಿಯನ್ನು ದಾನ ಮಾಡಬಾರದು.
ಸಂಜೆ ವೇಳೆ ಯಾರಾದ್ರೂ ಹಣ ಕೇಳಲು ಬಂದ್ರೆ ಅಪ್ಪಿತಪ್ಪಿಯೂ ಅವರಿಗೆ ದಾನ ನೀಡಬೇಡಿ. ಸೂರ್ಯಾಸ್ತದ ಸಮಯ ಲಕ್ಷ್ಮಿ ಮನೆಗೆ ಬರುವ ಸಮಯ. ಈ ವೇಳೆ ಹಣವನ್ನು ದಾನ ಮಾಡಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರ ಯಾರಿಗೂ ಅರಿಶಿನವನ್ನು ದಾನ ಮಾಡಬಾರದು. ಈ ದಿನ ಅರಿಶಿನ ದಾನ ಮಾಡುವುದ್ರಿಂದ ಗುರು ಗ್ರಹ ದುರ್ಬಲವಾಗುತ್ತದೆ.
ಸೂರ್ಯ ಹಾಗೂ ಚಂದ್ರ ಇಬ್ಬರನ್ನೂ ಹಾಲಿಗೆ ಹೋಲಿಕೆ ಮಾಡಲಾಗುತ್ತದೆ. ಸೂರ್ಯಾಸ್ತದ ವೇಳೆ ಹಾಗೂ ರಾತ್ರಿ ಹಾಲನ್ನು ದಾನ ಮಾಡಿದ್ರೆ ತಾಯಿ ಲಕ್ಷ್ಮಿ ಹಾಗೂ ನಾರಾಯಣ ಕೋಪಗೊಳ್ತಾರೆ ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊಸರನ್ನು ಶುಕ್ರನಿಗೆ ಹೋಲಿಸಲಾಗಿದೆ. ಇದು ಸಂತೋಷ-ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸೂರ್ಯಾಸ್ತದ ವೇಳೆ ಮೊಸರನ್ನು ದಾನ ಮಾಡಬಾರದು.