
ಚೀನಾದಲ್ಲಿ ನಡೆದಿರೋ ಈ ವಿಚಿತ್ರ ಘಟನೆ ಎಂಥವರನ್ನೂ ಬೆಚ್ಚಿ ಬೀಳಿಸುತ್ತೆ. ತಲೆ ಕತ್ತರಿಸಿ 20 ನಿಮಿಷಗಳ ನಂತರ ನಾಗರ ಹಾವೊಂದು ಬಾಣಸಿಗನಿಗೆ ಕಚ್ಚಿದೆ. ನಾಗರಹಾವಿನ ಕಡಿತದಿಂದ ಬಾಣಸಿಗ ಸಾವನ್ನಪ್ಪಿದ್ದಾನೆ. ಶಿರಚ್ಛೇದ ಮಾಡಿದ 20 ನಿಮಿಷಗಳ ನಂತರವೂ ಆ ನಾಗರಹಾವು ಜೀವಂತವಾಗಿತ್ತು.
ದಕ್ಷಿಣ ಚೀನಾದ ರೆಸ್ಟೋರೆಂಟ್ ಹಾವಿನ ಸೂಪ್‌ಗೆ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ನಾಗರ ಹಾವಿನ ಸೂಪ್ ತಯಾರಿಸುವಾಗ ಈ ಅವಘಡ ನಡೆದಿದ್ದು, ಬಾಣಸಿಗ ಪ್ರಾಣ ಕಳೆದುಕೊಂಡಿದ್ದಾನೆ. ರೆಸ್ಟೋರೆಂಟ್‌ನ ಶೆಫ್ ಪೆಂಗ್ ಫ್ಯಾನ್ ಎಂಬಾತ ಇಂಡೋಚೈನೀಸ್ ಸ್ಪಿಟಿಂಗ್ ಕೋಬ್ರಾ ಹಾವಿನ ಮಾಂಸದಿಂದ ತಾಜಾ ಸೂಪ್ ತಯಾರಿಸುತ್ತಿದ್ದ. ಇದಕ್ಕಾಗಿ ನಾಗರ ಹಾವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ತಲೆಯನ್ನು ಪಕ್ಕದಲ್ಲಿಟ್ಟಿದ್ದ.
ಸೂಪ್ ತಯಾರಿಸಲು ಆತನಿಗೆ ಸುಮಾರು 20 ನಿಮಿಷಗಳೇ ಬೇಕಾಯ್ತು. ಸೂಪ್ ರೆಡಿಯಾಗ್ತಿದ್ದಂತೆ ಆತ ಅಡುಗೆ ಮನೆ ಸ್ವಚ್ಛಗೊಳಿಸಲು ಆರಂಭಿಸಿದ್ದಾನೆ. ಕಸದ ಬುಟ್ಟಿಗೆ ಎಸೆಯಲೆಂದು ಕತ್ತರಿಸಿ ಇಟ್ಟಿದ್ದ ನಾಗರಹಾವಿನ ತಲೆಯ ಭಾಗವನ್ನು ಕೈಯ್ಯಲ್ಲಿ ಮೇಲಕ್ಕೆತ್ತಿದ್ದಾನೆ. ಈ ವೇಳೆ ನಾಗರಹಾವು ಬಾಣಸಿಗನಿಗೆ ಕಚ್ಚಿದೆ. ಕೂಡಲೇ ಆತ ವೈದ್ಯರಿಗೆ ಕರೆ ಮಾಡಿದ್ದಾನೆ. ಆದ್ರೆ ವೈದ್ಯರು ಬರುವ ಮುನ್ನವೇ ಬಾಣಸಿಗ ಮೃತಪಟ್ಟಿದ್ದಾನೆ.
ತಲೆ ಕತ್ತರಿಸಿದ ಬಳಿಕವೂ ಸುಮಾರು 1 ಗಂಟೆ ನಾಗರಹಾವಿಗೆ ಜೀವವಿರುತ್ತದೆ. ಶಿರಚ್ಛೇದ ಮಾಡಿದ 20 ನಿಮಿಷಗಳ ನಂತರವೂ ನಾಗರಹಾವು ಬದುಕುಳಿಯಬಹುದೆಂದು ಬಾಣಸಿಗನಿಗೆ ತಿಳಿದಿರಲಿಲ್ಲ. ತಜ್ಞರ ಪ್ರಕಾರ ಇದು ಬಹಳ ಅಪರೂಪದ ಪ್ರಕರಣವಾಗಿದೆ. ಸರೀಸೃಪಗಳು ಕೊಲ್ಲಲ್ಪಟ್ಟ ನಂತರ ಒಂದು ಗಂಟೆಯವರೆಗೆ ಚಲಿಸಬಹುದು ಎಂದು ಅವರು ಹೇಳುತ್ತಾರೆ. ನಾಗರಹಾವಿನ ವಿಷವು ತುಂಬಾ ಅಪಾಯಕಾರಿ. ಹಾಗಾಗಿ ನಾಗರ ಹಾವು ಕಚ್ಚಿ 30 ನಿಮಿಷಗಳೊಳಗೆ ವ್ಯಕ್ತಿ ಸಾಯುತ್ತಾನೆ.