alex Certify ಸುಸಂಸ್ಕೃತರ ಪಕ್ಷವಾಗಿರುವುದರಿಂದಲೇ ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ: ಈಶ್ವರಪ್ಪ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಸಂಸ್ಕೃತರ ಪಕ್ಷವಾಗಿರುವುದರಿಂದಲೇ ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ: ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಬಿಜೆಪಿ ಸುಸಂಸ್ಕೃತ ಪಕ್ಷ ಎಂದು ಜನ ತೀರ್ಮಾನಿಸಿ ಕೇಂದ್ರ ಮತ್ತು ಅನೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಾಮೀನಿನ ಮೇಲೆ ಹೊರ ಬಂದವರು. ಅವರ ಕೈಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ಪಕ್ಷವಿದೆ. ಬಾರ್‌ನಲ್ಲಿ ಕುಡಿದು ಹೊಡೆದಾಡಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದವನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ಜೆಡಿಎಸ್‌ಗೆ ಬರುವುದಾಗಿ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿA ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯನ್ನ ಅಧಿಕಾರಕ್ಕೆ ತಂದವರು ಜೆಡಿಎಸ್‌ಗೆ ಹೋಗ್ತಾರ ? ಬೀದಿಯಲ್ಲಿರುವ ನಾಯಿಯೂ ಜೆಡಿಎಸ್ ಗೆ ಹೋಗಲ್ಲ. ಇಬ್ರಾಹಿಂಗೆ ಮಾತ್ರ ಹೇಳ್ತಾ ಇದ್ದೇನೆ. ದೇವೇಗೌಡರಿಗೆ ಮತ್ತು ಕುಮಾರ ಸ್ವಾಮಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಇಬ್ರಾಹಿಂ ಜೆಡಿಎಸ್‌ಗೆ ಹೋಗಿದ್ದಾರೆ. ಮಾಡಲಿಕ್ಕೆ ಕೆಲಸವಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಮಹಾರಾಷ್ಟ್ರದ ಗಡಿ ಕನ್ನಡಿಗರು ಕುಡಿಯಲು ನೀರಿಲ್ಲವೆಂದು ಕರ್ನಾಕಟ ಸೇರಲು ಬಯಸುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆ ಮಿತಿಮೀರಿದೆ. ಪುಂಡರ ಮೇಲೆ ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಗೆ 100 ತಲೆ ರಾವಣ ಎಂದಿದ್ದಾರೆ. ಅವರಿಗೆ ಒಂದು ತಲೆಯೂ ಇಲ್ಲ. ಬೇರೆಯವರು ಮಾತನಾಡಿದ್ದರೆ ಬೇರೆ ರೀತಿ ಉತ್ತರ ಕೊಡ್ತಾ ಇದ್ದೆ. ಖರ್ಗೆ ಹೇಳಿದ್ದಕ್ಕೆ ಹೇಳುತ್ತಿದ್ದೇನೆ. ಮೋದಿ ಆದರ್ಶ ರಾಜಕಾರಣಿ, ಗ್ರಾಪಂ, ಜಿಪಂ, ವಿದಾನ ಸಭೆ ಚುನಾವಣೆಗೂ ಅವರ ಫೋಟೊ ಮತ್ತು ಹೆಸರು ಬಳಸಿಕೊಳ್ತೇವೆ. ನಿಮಗೆ ಯೋಗ್ಯತೆ ಇದ್ದರೆ ರಾಹುಲ್, ಸೋನಿಯಾ ಮುಖ ಇಟ್ಟುಕೊಂಡು ಮತಪಡೆಯಿರಿ ನೋಡೊಣ ಎಂದು ಸವಾಲು ಎಸೆದರು.

ಖರ್ಗೆ ಅವರೇ ರಬ್ಬರ್ ಸ್ಟ್ಯಾಂಪ್ ಆಗಬೇಡಿ, ಬೇರೆಯವರ ಮಾತು ಕೇಳಬೇಡಿ, ತಿದ್ದಿಕೊಳ್ಳಿ ತಿದ್ದಿಕೊಳ್ಳದಿದ್ದರೆ ಬೇರೆ ಭಾಷೆ ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...