
ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮುರಿ ಮುರಾಮಿ ಎಂಬ ಪುಟ್ಟ ಬಾಲಕಿ ಸುಮಧುರವಾದ ಧ್ವನಿಯಿಂದ ಹಾಡಿದ್ದಾಳೆ. ಸಲ್ಮಾನ್ ಖಾನ್-ರಾಣಿ ಮುಖರ್ಜಿ ಅಭಿನಯದ ಚಲನಚಿತ್ರದ ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡನ್ನು ಬಾಲಕಿ ಮುರಿ ಹಾಡಿದ್ದಾಳೆ.
ಮುರಿ ದಂತೇವಾಡ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಈಕೆ ಹಾಡಿರುವ ವಿಡಿಯೋ 67,700 ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನಪ್ರಿಯ ಹಾಡನ್ನು ಬಹಳ ಸುಂದರವಾಗಿ ಹಾಡಿದ್ದಕ್ಕೆ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಈಕೆಯ ಪ್ರತಿಭೆ ಮುಂದೊಂದು ದಿನ ಆಕೆಯನ್ನು ದೊಡ್ಡ ತಾರೆಯನ್ನಾಗಿ ಮಾಡುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡನ್ನು ಅಲ್ಕಾ ಯಾಗ್ನಿಕ್ ಮತ್ತು ಕುಮಾರ್ ಸಾನು ಹಾಡಿದ್ದಾರೆ. ಹಿಮೇಶ್ ರೇಶಮಿಯಾ ಅವರು ಸಂಯೋಜಿಸಿ ನಿರ್ದೇಶಿಸಿದ ಈ ಹಾಡು 90 ರ ದಶಕದಿಂದಲೂ ಸೂಪರ್‌ಹಿಟ್ ಆಗಿ ಮುಂದುವರೆದಿದೆ.