ಬೇಕಾಗುವ ಸಾಮಾಗ್ರಿಗಳು: ಹಲಸಿನ ಹಣ್ಣು- 1 ಕಪ್, ಹೆಸರುಬೇಳೆ- 1 ಕಪ್, ತೆಂಗಿನಕಾಯಿ- 1, ಬೆಲ್ಲ- 1 ¼ ಕಪ್, ತುಪ್ಪ, ದ್ರಾಕ್ಷಿ, ಗೋಡಂಬಿ.
ಮಾಡುವ ವಿಧಾನ: 1 ಕಪ್ ಹೆಸರು ಬೇಳೆಯನ್ನು ಹುರಿದುಕೊಳ್ಳಬೇಕು. ತುಂಬಾ ಕೆಂಪಗೆ ಹುರಿಯಬಾರದು. ಬೇಳೆ ಪರಿಮಳ ಬಂದರೆ ಸಾಕು. ಇದನ್ನು ತಣಿಯಲು ಬಿಡಿ. ಬಳಿಕ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ನಂತರ ಕುಕ್ಕರ್ ನಲ್ಲಿ ಬೇಳೆ ಮುಳುಗುವಷ್ಟು ನೀರು ಹಾಕಿ 4 ವಿಸಿಲ್ ಹಾಕಿ ಬೇಯಿಸಿ. ಬಳಿಕ 1 ತೆಂಗಿನಕಾಯಿಯನ್ನು ತುರಿದು ಮಿಕ್ಸಿ ಜಾರಿಗೆ ಹಾಕಿ ಹಾಲು ತೆಗೆಯಿರಿ.
ಬಿಸಿ ಬಿಸಿ ಚಹಾ ಜೊತೆ ಸವಿಯಿರಿ ʼಮಸಾಲಾ ವಡೆʼ
ಬಾಣಲೆಗೆ ತುಪ್ಪ ಹಾಕಿ ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ಇನ್ನೊಂದು ಪಾತ್ರೆಗೆ 1 ಕಪ್ ಹಲಸಿನ ಹಣ್ಣು ಹಾಕಿ. ಅದಕ್ಕೆ ಹಣ್ಣು ಮುಳುಗುವಷ್ಟು ನೀರು ಹಾಕಿ ಬೇಯಿಸಿ. ಇನ್ನೊಂದು ಪಾತ್ರೆಗೆ ಬೆಂದ ಹೆಸರುಬೇಳೆ ಹಾಕಿ. ಬಳಿಕ ಬೆಲ್ಲ ಹಾಕಿ. ಬೆಲ್ಲ ಕರಗಿ ಕುದಿ ಬರುವವರೆಗೂ ಕೈಯಾಡಿಸುತ್ತಿರಿ. ಬಳಿಕ ಕಾಯಿಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚೂರು ಉಪ್ಪು ಹಾಕಿ. ಮಧ್ಯಮ ಉರಿಯಲ್ಲಿ 8 ರಿಂದ 10 ನಿಮಿಷ ಕುದಿಸಬೇಕು. ಕೊನೆಗೆ ಬೆಂದ ಹಲಸಿನ ಹಣ್ಣು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 2 ರಿಂದ 3 ನಿಮಿಷ ಕುದಿಸಿ. ಜೊತೆಗೆ ಸ್ವಲ್ಪ ತುಪ್ಪ ಹಾಕಿ ತಿರುವಿರಿ. ಬಳಿಕ ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಹಾಕಿದರೆ ಹಲಸಿನ ಹಣ್ಣಿನ ಪಾಯಸ ರೆಡಿ.