ಮಕ್ಕಳು ತಿನ್ನಲು ಹೊರಗಿನ ಕುರುಕಲು ತಿಂಡಿಗೆ ಪೀಡಿಸುತ್ತಾರೆ, ಇಲ್ಲವಾದರೆ ಏನಾದರೂ ತಿಂಡಿ ಮಾಡಿಕೊಡಿ ಎಂದು ಅಮ್ಮಂದಿರನ್ನು ಪೀಡಿಸುತ್ತಲೇ ಇರುತ್ತವೆ.
ಈಗಿನ ಪರಿಸ್ಥಿತಿಯಲ್ಲಿ ಹೊರಗಿನ ತಿಂಡಿ ತಿನ್ನದಿರುವುದೇ ಒಳಿತು, ಹಾಗಾಗಿ ಮನೆಯಲ್ಲೇ ಏನಾದರು ಮಾಡಿಕೊಡಿ. ಮಕ್ಕಳಿಗೆ ಇಷ್ಟವಾಗುವ ವೆನಿಲ್ಲಾ ಪುಡ್ಡಿಂಗ್ ಮಾಡುವ ವಿಧಾನ ಇಲ್ಲಿದೆ. ಮಾಡುವುದು ಕೂಡ ಸುಲಭ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಹಾಲು-2 ಕಪ್, ಕಾರ್ನ್ ಫ್ಲೋರ್-3 ಟೇಬಲ್ ಸ್ಪೂನ್, ಸಕ್ಕರೆ-1/2 ಕಪ್, ಉಪ್ಪು-1/4 ಟೀ ಸ್ಪೂನ್, ಬೆಣ್ಣೆ-2 ಟೇಬಲ್ ಸ್ಪೂನ್, ವೆನಿಲ್ಲಾ ಎಸೆನ್ಸ್-2 ಟೀ ಸ್ಪೂನ್.
ಮಾಡುವ ವಿಧಾನ:
ಒಂದು ಬೌಲ್ ಗೆ ಸಕ್ಕರೆ, ಉಪ್ಪು, ಕಾರ್ನ್ ಫ್ಲೋರ್, ½ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಕ್ರೀಂ ನ ಹದಕ್ಕೆ ಬರಲಿ. ಒಂದು ಪ್ಯಾನ್ ನಲ್ಲಿ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಇಡಿ. ನಂತರ ಇದಕ್ಕೆ ಮಾಡಿಟ್ಟುಕೊಂಡ ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
ಇದು ದಪ್ಪಗಾಗಲಿ. ನಂತರ ಗ್ಯಾಸ್ ಆಫ್ ಮಾಡಿ ಬೆಣ್ಣೆ ಹಾಗೂ ವೆನಿಲ್ಲಾ ಎಸೆನ್ಸ್ ಸೇರಿಸಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಮುಚ್ಚಿ 8 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ ನಂತರ ಸರ್ವ್ ಮಾಡಿ.