ಅನಾನಸ್ : 410 ಗ್ರಾಂ.
ಕೇಸರಿ :1/8 ಚಮಚ
ನೀರು : ಒಂದು ದೊಡ್ಡ ಚಮಚ
ನೀರಿಲ್ಲದ ಗಟ್ಟಿ ಮೊಸರು : 400 ಗ್ರಾಂ
ಸಕ್ಕರೆ ಪುಡಿ : 175 ಗ್ರಾಂ
ಪಿಸ್ತಾ : 2 ದೊಡ್ಡ ಚಮಚ
ಚೆರ್ರಿ : ಅಲಂಕಾರಕ್ಕೆ
ಅನಾನಸ್ ಶ್ರೀಖಂಡ ಮಾಡುವ ವಿಧಾನ :
ಮೊದಲು ಅನಾನಸ್ ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳನ್ನು ಮಾಡಿಕೊಳ್ಳಿ. ಇನ್ನೊಂದು ಪಾತ್ರೆಗೆ ಕೇಸರಿ, ನೀರನ್ನು ಹಾಕಿ ಮಿಕ್ಸ್ ಮಾಡಿ 30 ನಿಮಿಷ ನೆನೆಸಿಡಿ.
ಇನ್ನೊಂದು ಪಾತ್ರೆಗೆ ಗಟ್ಟಿ ಮೊಸರು, ಅನಾನಸ್, ಸಕ್ಕರೆ ಪುಡಿ, ಕೇಸರಿ-ನೀರಿನ ಮಿಶ್ರಣ, ಪಿಸ್ತಾ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಸರ್ವಿಸ್ ಬೌಲ್ ಗೆ ಈ ಮಿಶ್ರಣವನ್ನು ಹಾಕಿ ಚೆರ್ರಿ ಹಾಗೂ ಪಿಸ್ತಾವನ್ನು ಮೇಲಿಟ್ಟು ಅಲಂಕರಿಸಿ.