ಸಿಹಿ ತಿನ್ನಬೇಕು ಅನಿಸಿದಾಗಲೆಲ್ಲಾ ಮನೆಯಲ್ಲಿಯೇ ಮಾಡಿ ಸವಿಯಿರಿ ಈ ತೆಂಗಿನಕಾಯಿ ಬರ್ಫಿ. ಮಾಡುವುದಕ್ಕೂ ಸುಲಭವಿದೆ. ಹೆಚ್ಚೆನೂ ಸಾಮಾಗ್ರಿಗಳು ಬೇಕಾಗಿಲ್ಲ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: 3 ಕಪ್-ತೆಂಗಿನತುರಿ, 2 ಕಪ್- ಸಕ್ಕರೆ, ½ ಕಪ್- ಹಾಲು, ¼ ಟೀ ಸ್ಪೂನ್-ಏಲಕ್ಕಿ ಪುಡಿ.
ಮೊದಲಿಗೆ ಒಂದು ದೊಡ್ಡ ಬಾಣಲೆಗೆ 3 ಕಪ್ ಕಾಯಿತುರಿ, 2 ಕಪ್ ಸಕ್ಕರೆ, ½ ಕಪ್ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣ ಉರಿಯಲ್ಲಿ ಗ್ಯಾಸ್ ಮೇಲೆ ಇಡಿ. 10 ನಿಮಿಷಗಳ ಕಾಲ ಕೈಯಾಡಿಸುತ್ತಲೆ ಇರಿ. ನಂತರ 2 ಟೇಬಲ್ ಸ್ಪೂನ್ ನಷ್ಟು ಕ್ರೀಂ ಸೇರಿಸಿ. ಈ ಮಿಶ್ರಣ ದಪ್ಪಗಾಗುವವರಗೆ 20 ನಿಮಿಷಗಳ ಕಾಲ ತಿರುವುತ್ತಾ ಇರಿ. ತಳಹತ್ತದಂತೆ ನೋಡಿಕೊಳ್ಳಿ. ಈ ಮಿಶ್ರಣ ಒಂದು ಮುದ್ದೆ ರೀತಿ ಆಗುವವರೆಗೆ ಚೆನ್ನಾಗಿ ತಿರುವಿ ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
ನಂತರ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣ ಹಾಕಿ ಸಮತಟ್ಟು ಮಾಡಿಕೊಳ್ಳಿ. 10 ನಿಮಿಷ ಬಿಟ್ಟು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.